ಮೈಸೂರು,ಡಿಸೆಂಬರ್,8,2021(www.justkannada.in): ಮನೆ ಮುಂಭಾಗ ಆಟವಾಡುತ್ತಿದ್ದ ಎರಡು ವರ್ಷದ ಮಗು ಕಿಡ್ನಾಪ್ ಆಗಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಯಾದವಗಿರಿಯಲ್ಲಿ ಈ ಘಟನೆ ನಡೆದಿದೆ. ಯಾದವಗಿರಿಯ ನಿವಾಸಿ ದಿನೇಶ್ ಎಂಬುವವರ ಪುತ್ರಿ ರಿಯಾ(2) ಕಾಣೆಯಾಗಿರುವ ಮಗು. ಇಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಯಲ್ಲಿ ರಿಯಾ ಕಾಣೆಯಾಗಿದ್ದು, ಹಾಸಿಗೆ ಹೊಲೆಯುವ ನೆಪದಲ್ಲಿ ಬಂದು ಮಗು ಕಿಡ್ನಾಪ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.
Key words: 2 year-old- kid –kidnapped-mysore