ಮೈಸೂರು,ಡಿಸೆಂಬರ್,9,2021(www.justkannada.in): ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕತೆ ವೃದ್ಧಿಗಾಗಿ ಸರ್ಕಾರ ಮೊಟ್ಟೆ ನೀಡಲು ಮುಂದಾಗಿದ್ದು ಇದಕ್ಕೆ ಹಲವು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮಠಾಧೀಶರ ಈ ನಡೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆಎಸ್ ಶಿವರಾಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಕೆಎಸ್ ಶಿವರಾಂ, ಮಕ್ಕಳಿಗೆ ಮೊಟ್ಟೆ ನೀಡುವ ವಿಚಾರದಲ್ಲಿ ಮಠಾಧೀಶರ ವಿರೋಧ ಖಂಡನೀಯ. ಡಿಸೆಂಬರ್ 12 ರಂದು ಮೊಟ್ಟೆ ವಿತರಣೆ ವಿರೋಧಿಸಿ ಸಮಾವೇಶ ಮಾಡಲು ಹೊರಟಿರುವುದು ನಾಚಿಕೆಗೇಡು. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುತ್ತಿದೆ.
ಮಠಾಧೀಶರ ವಿರುದ್ದ ನಾವು ಕೂಡ ಅಂಚೆ ಚಳುವಳಿ ಮಾಡುತ್ತೇವೆ. ಸಿಎಂಗೆ ಪತ್ರ ಬರೆಯುವ ಮೂಲಕ ಮೊಟ್ಟೆ ನಿಲ್ಲಿಸಬಾರದೆಂದು ಆಗ್ರಹಿಸುತ್ತೇವೆ ಎಂದು ಶಿವರಾಂ ತಿಳಿಸಿದರು.
Key words: opposition – issue – egg – children –swamiji’s- KS Shivaram –outrage-mysore