ಬೆಂಗಳೂರು,ಡಿಸೆಂಬರ್,14,2021(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಆಡಳಿತ ವಿಭಾಗದ ಕುಲಸಚಿವ ಪ್ರೊ.ಆರ್. ಶಿವಪ್ಪ ಅವರ ವರ್ಗಾವಣೆಗೆ ಹೈಕೋರ್ಟ್ ಮತ್ತೆ ತಡೆಯಾಜ್ಞೆ ನೀಡಿದೆ.
ಪ್ರೊ.ಆರ್. ಶಿವಪ್ಪ ಅವರು 2019 ರ ಸೆಪ್ಟೆಂಬರ್ ನಲ್ಲಿ ಅವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ನವೆಂಬರ್ ನಲ್ಲಿ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಪ್ರಶ್ನಿಸಿ, ಶಿವಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ವೇಳೆ ತಡೆಯಾಜ್ಞೆ ಸಿಕ್ಕಿದ್ದರಿಂದ ಆರ್ .ಶಿವಪ್ಪ ಕುಲಸಚಿವರಾಗಿ ಮುಂದುವರಿದ್ದರು.
ಈಗ ಮತ್ತೆ ಡಿಸೆಂಬರ್.3ನೇ ದಿನಾಂಕ ನಮೂದಿಸಿ ಅವರನ್ನು ಮಾತೃ ವಿಭಾಗಕ್ಕೆ (ಮಾನಸ ಗಂಗೋತ್ರಿ ಸಮಾಜ ಕಾರ್ಯ) ವರ್ಗಾಯಿಸಲಾಗಿತ್ತು. ಆದರೆ ಈ ಆದೇಶ ಡಿಸೆಂಬರ್.9 ರಂದು ಶಿವಪ್ಪ ಅವರಿಗೆ ತಲುಪಿತ್ತು. ಮರುದಿನವೇ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ಡಿಸೆಂಬರ್ 13 ರಂದು ಹೈಕೋರ್ಟ್ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಹಿಂದಿನ ವರ್ಗಾವಣೆ ಸ0ಬ0ಧ ತಡೆಯಾಜ್ಞೆ ನೀಡಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗಿ ತಮ್ಮ ನಿಲುವು ತಿಳಿಸಿಲ್ಲ. ಹೀಗಿದ್ದರೂ ಮತ್ತೆ ವರ್ಗಾವಣೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಶಿವಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.
Key words: Mysore university- Registrar -Prof.R. Shivappa -High Court –stay- transfer.