ಶ್ರೀರಂಗಪಟ್ಟಣ,ಡಿಸೆಂಬರ್,18,2021(www.justkannada.in): ಪಟ್ಟಣದ ಡಿಎಂಎಸ್ ಚಂದ್ರವನ ಆಶ್ರಮದಲ್ಲಿ ಡಿಸೆಂಬರ್ 19ರ ಭಾನುವಾರ ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಶ್ರೀ ತ್ರಿನೇತ್ರ ಅಂತರಾಷ್ಟ್ರೀಯ ಯೋಗ ಅಧ್ಯಯನ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಹಾಗೂ ಡಿಎಂಎಸ್ ಸಂಸ್ಕೃತ, ವೇದ, ಆಗಮ, ಜ್ಯೋತಿಷ್ಯ ಗುರುಕುಲ ಪಾಠಶಾಲೆಯ 4ನೇ ವರ್ಷದ ಘಟಿಕೋತ್ಸವ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 5.30ಕ್ಕೆ ಶತಕದೆಂಟರ ಬೆಳದಿಂಗಳ ಕಾವೇರಿ ದೀಪಾರತಿ, ಸಂಗೀತೋತ್ಸವ, ಧಾರ್ಮಿಕ ಕಾರ್ಯಕ್ರಮ, ಪುಸ್ತಕ ಲೋಕಾರ್ಪಣೆ, ಅಂತರಾಷ್ಟ್ರೀಯ ಕಾವೇರಿ ಪ್ರಶಸ್ತಿ, ಕಲಾಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ. ಪದ್ಮಶ್ರೀ ಹರೇಕಳ ಹಾಜಬ್ಬ ಅವರಿಗೆ ಕಾವೇರಿ ಪ್ರಶಸ್ತಿ ಹಾಗೂ ಕಲಾವಿದ ಪ್ರಕಾಶ ಚಿಕ್ಕಪಾಳ್ಯ ಅವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವಾಣಿಚಂದ್ರಯ್ಯ ನಾಯ್ಡು ಬರೆದಿರುವ ಪೂರ್ಣಚಂದ್ರ ದರ್ಶನ ಕೃತಿಯನ್ನು ಕರ್ನಾಟಕ ಗಡಿ ಅಭಿವೃದ್ದಿ ಪ್ರಾಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಬಿಡುಗಡೆ ಮಾಡುವರು. ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಸಿ.ಎಸ್.ಪುಟ್ಟರಾಜು, ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕಸಾಪ ಅಧ್ಯಕ್ಷ ಮಹೇಶ ಜೋಶಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
Key words: Cauvery Award – Harekala hajabba-book release-shrirangapatna- Presenting- tomorrow.