ಬೆಳಗಾವಿ,ಡಿಸೆಂಬರ್,18,2021(www.justkannada.in): ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ಪುಂಡಾಟ ಮೆರೆದಿರುವ ಎಂಇಎಸ್ ವಿರುದ್ಧ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ಮಧ್ಯೆ ಇತ್ತ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನನಗೆ ಎರಡೂ ಸಮುದಾಯಗಳು ಮುಖ್ಯ ಎಂದಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಶಿವಾಜಿ ಮಹಾರಾಜರ ಪ್ರತಿಮೆ ಧ್ವಂಸ ಮಾಡಿದ್ರು, ಮತ್ತೊಂದೆಡೆ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಧ್ವಂಸ ಮಾಡಿದ್ರು. ಯಾಕೆ ಈ ರೀತಿ ಮಾಡ್ತಿದ್ದಾರೋ ಗೊತ್ತಿಲ್ಲ. ರಾತ್ರೋ ರಾತ್ರಿ ಈ ರೀತಿ ಘಟನೆ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ನಾನು 2 ಸಮುದಾಯದ ಜತೆ ಮಾತನಾಡಿದ್ದೇನೆ. ನನಗೆ ಎರಡು ಸಮುದಾಯ ಮುಖ್ಯ. ನಾವು ಭಾರತ ದೇಶದಲ್ಲಿದ್ದೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
Key words: distortion –statue-Sangolli rayanna-MLA-Lakshmi Hebbalkar.