ಬೆಂಗಳೂರು,ಡಿಸೆಂಬರ್,21,2021(www.justkannada.in): ಪ್ರಧಾನಮಂತ್ರಿಯವರ ಬಜೆಟ್ ಪೂರ್ವ ಸಭೆಗಳನ್ನು ನಡೆಸಿದ ರೀತಿಯನ್ನು ಸ್ವಾಗತಿಸಿದರು ಹಾಗೂ ಮುಂದಿನ ಕ್ರಮದ ಅಗತ್ಯವಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಡಾ. ಐ.ಎಸ್ ಪ್ರಸಾದ್ ತಿಳಿಸಿದರು.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಬೇಕಾಗುವ ಕಚ್ಚಾ ಪದಾರ್ಥಗಳ ಬೆಲೆಗಳನ್ನು ನಿಯಂತ್ರಸದಿದ್ದರೆ ಕೇಂದ್ರ ಸರ್ಕಾರ ಘೋಷಿಸಿರುವ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹದ ಯೋಜನೆಗಳ ಉದ್ದೇಶ ವಿಫಲಗೊಳ್ಳುತ್ತವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾದ ಡಾ.ಐ.ಎಸ್. ಪ್ರಸಾದ್ ರವರು ತಿಳಿಸಿದರು.
ಅನುಸರಿಸಬೇಕಾದ ನಿಯಮ ಹಾಗೂ ನಿಯಂತ್ರಣದ ವಿಧಾನದ ಹೊರೆಯನ್ನು ಕಡಿಮೆ ಮಾಡಲು ಪ್ರಧಾನಮಂತ್ರಿಯವರ ಸಲಹೆಗಳಿಗೆ ಪ್ರತಿಕ್ರಿಯಿಸಿದ ಎಫ್ಕೆಸಿಸಿಐನ ಅಧ್ಯಕ್ಷ ಡಾ.ಐ.ಎಸ್ ಪ್ರಸಾದ್, ಉದ್ಯಮ ಮತ್ತು ವ್ಯಾಪಾರ ಸಮೂಹದಿಂದ ಪೂರೈಸಬೇಕಾದ ವಿವಿಧ ಇಲಾಖೆಗಳ ಎಲ್ಲಾ ನಿಯಂತ್ರಕ ಅವಶ್ಯಕತೆಗಳನ್ನು ಪಟ್ಟಿ ಮಾಡಿ ಮುಖ್ಯ ಕಡತವನ್ನಾಗಿ ಪರಿವರ್ತಿಸಲು, ಸರಳೀಕರಣಗೊಳಿಸಲು ಹಾಗೂ ಅನುಸರಣೆಯನ್ನು ಸುಧಾರಿಸಲು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ ಸುಧಾರಣಾ ಮಾರ್ಗದಲ್ಲಿ ಮುಂದುವರಿದರೆ ಮಾತ್ರ ದೇಶದ ಕೈಗಾರಿಕಾಗಳನ್ನು ವಿಶ್ವದ ಅಗ್ರ ಐದು ಸ್ಥಾನದಲ್ಲಿ ಕಾಣುವ ದೇಶದ ಆಕಾಂಕ್ಷೆ ಈಡೇರುತ್ತದೆ ಮತ್ತು ಯಾವುದೇ ಒತ್ತಡದ ಪರಿಣಾಮದಿಂದ ಒಂದು ಹೆಜ್ಜೆಯೂ ಹಿಂದೆ ಸರಿಯುವುದಿಲ್ಲ ಎಂಬ ಆತ್ಮವಿಶ್ವಾಸ ಹೊಂದಿರಬೇಕು. ಅಗತ್ಯವಿರುವ ರೀತಿಯ ಸುಧಾರಣೆಗಳ ಉದಾಹರಣೆಯನ್ನು ಅಧ್ಯಕ್ಷರು ಉಲ್ಲೇಖಿಸುತ್ತಾ ಇತ್ತೀಚಿಗೆ ”ಸಂಸತ್ತಿನಲ್ಲಿ ಚರ್ಚೆನಲ್ಲಿರುವ ಕರಡು ವಿದ್ಯುತ್ ಬಿಲ್ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಖಾಸಗಿ ವಿದ್ಯುತ್ ವಿತರಣಾ ಕಂಪನಿಗಳ ಅಡೆತಡೆಯಿಲ್ಲದೆ ಪ್ರವೇಶಸಲು ಅನುವು ಮಾಡಿಕೊಡುತ್ತದೆ” ಎಂದು ಅವರು ಗಮನ ಸೆಳೆದರು.
Key words: FKCCI President- Prasad- welcomed – pre-budget -meetings – Prime Minister