ಬೆಂಗಳೂರು, ಡಿ.22, 2021 : (www.justkannada.in news ) ಹಿರಿಯ ವಿದ್ವಾನ್ ಹಾಗೂ ಅಧ್ಯಾತ್ಮಿಕ ಚಿಂತಕ ಪ್ರವಚನಕಾರ ಲಕ್ಷ್ಮಣದಾಸ್ ವೇಲಣಕರ್ ನಿಧನ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರ, ಖ್ಯಾತ ಹಿಂದೂಸ್ತಾನಿ ಗಾಯಕ ದತ್ತಾತ್ರೇಯ ವೇಲಣಕರ್ ಅವರನ್ನು ಅಗಲಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಚಿತಾಗಾರದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಲಕ್ಷ್ಮಣದಾಸ್ ಅವರು ಹೆಸರಾಂತ ಹರಿಕಥಾ ವಿದ್ವಾನ್ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸರ ಶಿಷ್ಯರಾಗಿದ್ದರು. ಅವರ ನಂತರ ರಾಜ್ಯದಲ್ಲಿ ಹರಿಕಥಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಸಾಕಷ್ಟು ಶ್ರಮಿಸಿದ್ದರು. ಗೋರಖ್ ಪುರದ ಗೀತಾ ಪ್ರೆಸ್ ನ ನೂರಕ್ಕೂ ಅಧಿಕ ಅಧ್ಯಾತ್ಮಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಷಡ್ಜಾ ಕಲಾಕೇಂದ್ರವನ್ನು ಸ್ಥಾಪಿಸಿ ಆಧ್ಯಾತ್ಮಿಕ, ಸಂಗೀತ ಹಾಗೂ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದರು.
key words : keerthanacharya-lakshmanadas-nomore-harikatha-vidhwan