ಬೆಂಗಳೂರು:ಜುಲೈ-30:(www.justkannada.in) ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್‌ಗಳು ಡೈನಾಮಿಕ್ ಸಿಗ್ನಲಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಈ ಮೂಲಕ ಈಗ ಗೂಗಲ್ ಮ್ಯಾಪ್ ನಲ್ಲಿ ಕೂಡ ಕಾರ್ಯನಿರ್ವಹಿಸಲಿವೆ.
ಎಲೆಕ್ಟ್ರಾನಿಕ್ ಸಿಟಿಯ ಸುಮಾರು 6 ಪ್ರಮುಖ ಸಿಗ್ನಲ್ ಗಳನ್ನು ಡೈನಾಮಿಕ್ ಸಿಗ್ನಲಿಂಗ್ ತಂತ್ರಜ್ಞಾನಕ್ಕೆ ಅನ್ವಯವಾಗುವಂತೆ ಸಿದ್ಧಗೊಳಿಸಲಾಗಿದ್ದು, ಇವು ಗೂಗಲ್ ಮ್ಯಾಪ್ ನಲ್ಲಿ ಕೂಡ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಸಂಚಾರ ದಟ್ಟಣೆಯ ಸಂಪೂರ್ಣ ಮಾಹಿತಿಗಳನ್ನು ಗೂಗಲ್ ಮ್ಯಾಪ್ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಇದು ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್ ತಂತ್ರಜ್ನಾನವಾಗಿದ್ದು, ಬುದ್ಧಿವಂತ ಸಂಚಾರ ನಿರ್ವಹಣಾ ವ್ಯವಸ್ಥೆಯ ಭಾಗ. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ಇಎಲ್‌ಸಿಐಟಿಎ) ಜಗತ್ತಿನಾದ್ಯಂತ ಲಭ್ಯವಿರುವ ವಿವಿಧ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಿ ಈ ವಿನೂತನ ಆಧುನಿಕ ತಂತ್ರಜ್ನಾನವನ್ನು ಅಳವಡಿಸಿದೆ.
“ನಾವು ಈಗ ಈ ಡೈನಾಮಿಕ್ ಸಿಗ್ನಲಿಂಗ್ ತಂತ್ರಜ್ಞಾನವನ್ನು ವೆಸ್ಟ್ ಫೇಸ್ ಎಸ್‌ಬಿಐ (ಟೋಲ್) ಜಂಕ್ಷನ್, ಸೀಮೆನ್ಸ್ ಜಂಕ್ಷನ್, ಪ್ಯಾರಾಮೌಂಟ್ ಜಂಕ್ಷನ್ ಮತ್ತು ವಿಪ್ರೊ ಜಂಕ್ಷನ್‌ನಲ್ಲಿ ಸಿಂಕ್ರೊನೈಸ್ಡ್ ಮೋಡ್‌ನಲ್ಲಿ ಮತ್ತು ಆರ್ ಎಸ್ ಜಂಕ್ಷನ್ ಮತ್ತು ಒಟೆರಾ ಜಂಕ್ಷನ್‌ನಲ್ಲಿ ಸ್ಟ್ಯಾಂಡ್-ಅಲೋನ್ ಮೋಡ್‌ನಲ್ಲಿ ಪರಿಚಯಿಸಿದ್ದೇವೆ. ಇಲ್ಲಿ ಮೊದಲಿಗೆ ರೆಗ್ಯೂಲರ್ ಆಟೋಮೆಟಿಕ್ ಸಿಗ್ನಲ್ ಗಳು ಕಾರ್ಯನಿರ್ವಹಿಸುತ್ತಿದ್ದವು. ಇವುಗಳ ಬದಲಿಗೆ ಈಗ ಡೈನಾಮಿಕ್ ಸಿಗ್ನಲಿಂಗ್ ಗಳನ್ನು ಅಳವಡಿಸಿರುವುದಾಗಿ ಇಎಲ್‌ಸಿಐಟಿಎ ಅಧಿಕಾರಿ ರಾಮ ಎನ್ ಎಸ್ ತಿಳಿಸಿದ್ದಾರೆ.