ದೇಶದಲ್ಲಿ ಕೊರೋನಾ ಪ್ರಕರಣಗಳ ಮತ್ತೆ ಏರಿಕೆ.

ನವದೆಹಲಿ,ಡಿಸೆಂಬರ್,31,2021(www.justkannada.in): ಹೊಸ ವರ್ಷದ ಸಂಭ್ರಮಾಚರಣೆಗೆ ಒಂದು ದಿನ ಬಾಕಿ ಇರುವ ಮುನ್ನ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹೌದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 16,764 ಜನರಲ್ಲಿ ಹೊಸದಾಗಿ ಕೋವಿಡ್ ಪ್ರಕರಣ ದೃಢವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕಳೆದ 24 ಗಂಟೆಯಲ್ಲಿ 220 ಜನರು ಕೊರೋನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 4,81,080 ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 91361 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 7585 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 34266363 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ನಿನ್ನೆ ದೇಶದಲ್ಲಿ 12,50,837 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು, 24 ಗಂಟೆಯಲ್ಲಿ 66,65,290 ಜನರಿಗೆ ಲಸಿಕೆ ನೀಡಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1,44,54,16,714 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1270ಕ್ಕೆ ಏರಿಕೆ.

ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1270ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 450, ದೆಹಲಿಯಲ್ಲಿ  320,  ಗುಜರಾತ್ ನಲ್ಲಿ 97 ತೆಲಂಗಾಣ 62  ಆಂಧ್ರ 16, ಹರಿಯಾಣ ಒಡಿಶಾ ತಲಾ 14  ಪ. ಬಂಗಾಳ 11 ಪ್ರಕರಣಗಳಿವೆ.  

Key words: increase -corona -cases – country.

ENGLISH SUMMARY…

The increasing number of Corona cases has caused concern as the new year arrives.
New Delhi, December 31, 2021 (www.justkannada.in): The number of Corona cases has increased as the new year has arrived. About 16,764 new cases were reported across the country in the last 24 hours.
According to the information provided by the Union Health Ministry, 220 people have lost their lives at the same time increasing the tally to 481080. There are 91361 active cases as of now across the country and 7585 people have recovered in the last 24 hours. The number of people who have recovered and been discharged from the hospital has increased to 34266363.
A total number of 1250837 tests were conducted across the country yesterday and the number of vaccinations administered in the last 24 hours is 6665290. The number of total vaccinations administered has increased to 1,44,54,16,714.
The number of Omicron cases has also increased to 1270. While Maharashtra has registered the highest number at 450, the cases in other states are as follows: Delhi (320), Gujarath (97), Telangana (62) Andhra Pradesh (16), Haryana and Orissa (14 respectively), West Bengal (11).
Keywords: COVID-19/ Corona cases/ increase/ New Year/ Omicron