ಬೆಂಗಳೂರು,ಜನವರಿ,5,2022(www.justkannada.in): ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಸೋಂಕು ತಡೆಗಟ್ಟಲು ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಕಠಿಣ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕೋವಿಡ್ ತಡೆಗಾಗಿ ನೈಟ್ ಕರ್ಫ್ಯೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ವಿಕೇಂಡ್ ಕರ್ಫ್ಯೂ ವೇಳೆ ಬಿಎಂಟಿಸಿ ಬಸ್ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಬಿಎಂಟಿಸಿ ಎಂಡಿ ಅನ್ಬುಕುಮಾರ್, ವೀಕೆಂಡ್ ಕರ್ಫ್ಯೂ ವೇಳೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ರಸ್ತೆಗಿಳಿಯಲ್ಲ. ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ ಅಗತ್ಯ ಸೇವೆಗಳಿಗೆ ಮಾತ್ರ ಬಸ್ ಸಂಚಾರ ಇರುತ್ತದೆ ಎಂದಿದ್ದಾರೆ.
ಇನ್ನು ವೀಕೆಂಡ್ ಕರ್ಫ್ಯೂ ವೇಳೆ ಕೆಎಸ್ ಆರ್ ಟಿಸಿ ಬಸ್ ಸಂಚಾರ ಯಥಾಸ್ಥಿತಿ ಇರಲಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಾಡಲಿದ್ದು, ರಾಜ್ಯ ಹೊರ ರಾಜ್ಯಗಳ ನಡುವೆ ಬಸ್ ಸಂಚಾರವೂ ಇರಲಿದೆ. ಮಹಾರಾಷ್ಟ್ರ ಕೇರಳ ತಮಿಳುನಾಡು ಗೋವಾ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ವರದಿ ಕಡ್ಡಾಯ ಮಾಡಲಾಗಿದೆ.
ಹಾಗೆಯೇ ವೀಕೆಂಡ್ ಕರ್ಫ್ಯೂನಲ್ಲಿ. ಮೆಟ್ರೋ ರೈಲು ಸಂಚಾರಕ್ಕೆಅಡ್ಡಿಯಿಲ್ಲ. ನಮ್ಮಮೆಟ್ರೋದಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
Key words: Weekend Curfew- BMTC- Bus -KSRTC