ಕಲಬುರಗಿ,ಮೇ,9,2019(www.justkannada.in) ನಾಲ್ಕಾರು ಪಕ್ಷಗಳನ್ನ ಬಿಟ್ಟು ಬಂದ ಸುಭಾಷ್ ರಾಠೋಡ್ ನೀತಿಗೆಟ್ಟವನು, ನಾನಲ್ಲ. ಪದೇ ಪದೇ ಪಕ್ಷ ಬದಲಿಸುತ್ತ ಖರ್ಗೆ ವಿರುದ್ಧ ಹೋರಾಟ ಮಾಡಿದವನು. ಈಗ ಖರ್ಗೆ ಕಾಲಿಗೆ ಬಿದ್ದು ಟಿಕೆಟ್ ಪಡೆದಿದ್ದಾನೆ ಎಂದು ಚಿಂಚೋಳಿ ಕೈ ಅಭ್ಯರ್ಥಿ ವಿರುದ್ದ ಡಾ.ಉಮೇಶ್ ಜಾಧವ್ ಕಿಡಿಕಾರಿದ್ದಾರೆ.
ಚಿಂಚೋಳಿಯಲ್ಲಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಉಮೇಶ್ ಜಾಧವ್, ರಾಠೋಡ್ ನಾಲ್ಕು ಪಕ್ಷಗಳ ತಟ್ಟೆಯನ್ನ ಕಾಲಿನಿಂದ ಒದ್ದಿದ್ದಾನೆ. ಊಟದ ತಟ್ಟೆಯನ್ನ ಒದೆಯುವ ಸಂಸ್ಕೃತಿ ನಮದಲ್ಲ. ಜೀವನಪೂರ್ತಿ ಖರ್ಗೆ ವಿರುದ್ದ ಹೋರಾಡುತ್ತಿದ್ದ ರಾಠೋಡ್ ಈಗ ಟಿಕೆಟ್ ಗಾಗಿ ಖರ್ಗೆ ಕಾಲಿಗೆ ಬಿದ್ದಿದ್ದಾನೆ. ಹೊರಗಿನವರನ್ನ ಜನರು ತಿರಸ್ಕರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನಾಳೆ ಚಿಂಚೋಳಿಯಲ್ಲಿ ಸಿದ್ದರಾಮಯ್ಯ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಉಮೇಶ್ ಜಾಧವ್, ಸಿದ್ದರಾಮಯ್ಯ ಅವರು ನನ್ನ ರಾಜಕೀಯ ಗುರುಗಳು, ಬಂದು ಅವರ ಕೆಲಸ ಅವರು ಮಾಡಲಿ, ನನ್ನ ಕೆಲಸ ನಾನು ಮಾಡುತ್ತೇನೆ. ಒಂದು ವೇಳೆ ನನ್ನ ವಿರುದ್ದ ಅವರು ಟೀಕಿಸಿದರೇ ನಾನು ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು.
Key words: Rathod- fought -against –mallikarjuna Kharge- fallen- leg- Umesh Jadhav