ದಾವಣಗೆರೆ,ಜನವರಿ,10,2022(www.justkannada.in): ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ರಾಜ್ಯದ ಜನತೆಗೆ ಕ್ಷಮೆಯಾಚಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಭಾಗವಹಿಸಿದ್ದರು. ನಿನ್ನೆ ವೀಕೆಂಡ್ ಕರ್ಫ್ಯೂ ವೇಳೆಯಲ್ಲಿಯೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೇಣುಕಾಚಾರ್ಯ ಭಾಗಿ ಆಗಿದ್ದರು. ಈ ಮೂಲಕ ತಮ್ಮ ಸರ್ಕಾರ ಜಾರಿ ಮಾಡಿರುವ ನಿಯಮಗಳನ್ನೇ ಉಲ್ಲಂಘಿಸಿದ್ದರು.
ಈ ಹಿನ್ನೆಲೆಯಲ್ಲಿ ಇದಕ್ಕೆ ಶಾಸಕ ಎಂ.ಪಿ ರೇಣುಕಾಚಾರ್ಯ ಕ್ಷಮೆ ಕೋರಿದಿದ್ದಾರೆ. ನನ್ನಿಂದ ತಪ್ಪಾಗಿದೆ. ಈ ಘಟನೆ ಬಗ್ಗೆ ನಾನು ಬಹಿರಂಗವಾಗಿ ಕ್ಷಮೆ ಯಾಚಿಸುವೆ. ಕೋವಿಡ್ ವೇಳೆ ಚೆನ್ನಾಗಿ ಕೆಲಸ ಮಾಡಿದ್ದೆ. ಆದ್ರೆ ಇಂದಿನ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಹಿನ್ನೆಲೆ ನಾನು ರಾಜ್ಯದ ಜನತೆಗೆ ವಿಲನ್ ರೀತಿ ಕಾಣುತ್ತಿರುವೆ. ಕಾಂಗ್ರೆಸ್ ಪಾದಯಾತ್ರೆ ಖಂಡಿಸಿದ್ದೆ. ಈ ಘಟನೆಯಿಂದ ಪಾದಯಾತ್ರೆ ಖಂಡಿಸುವ ನೈತಿಕತೆ ಕಳೆದು ಕೊಂಡಿದ್ದೇನೆ. ದಯಮಾಡಿ ಕ್ಷಮಿಸಿ ಎಂದು ರಾಜ್ಯದ ಜನತೆಗೆ ಶಾಸಕ ರೇಣುಕಾಚಾರ್ಯ ಬಹಿರಂಗ ಕ್ಷಮೆಯಾಚಿಸಿದ್ದಾರೆ.
Key words: MLA -MP Renukacharya – Violation – Covid- rule