‘ ಕೆರಿಯರ್ ಹಬ್ ‘ ಮೂಲಕ ಪ್ರತಿ ವರ್ಷ ಎರಡು ಸಾವಿರ ಮಂದಿಗೆ ಉದ್ಯೋಗದ ಗುರಿ : ಕುಲಪತಿ ಪ್ರೊ.ಹೇಮಂತ್ ಕುಮಾರ್

ಮೈಸೂರು, ಜ.13, 2022 : (www.justkannada.in news ) ಪರೀಕ್ಷೆ ‌ಬಳಿಕ‌ ಮುಂದೇನು ಎಂಬ ಪ್ರಶ್ನೆ ಬಹುತೇಕ ವಿದ್ಯಾರ್ಥಿಗಳನ್ನು ಕಾಡುತ್ತದೆ. ಈ‌ ನಿಟ್ಟಿನಲ್ಲಿ ಮೈಸೂರು ವಿವಿ ವತಿಯಿಂದ ‘ ಕೆರಿಯರ್ ಹಬ್ ‘ ಸ್ಥಾಪನೆ ಮಾಡಲಾಗಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿವಿ ಮಾನಸ ಗಂಗೋತ್ರಿ ವಿಜ್ಞಾನ ಭವನದ ಸೆಮಿನಾರ್ ಹಾಲ್‌ನಲ್ಲಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಹೊಸ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೆರಿಯರ್ ಹಬ್ ಮೂಲಕ ಪ್ರತಿ ವರ್ಷ ಎರಡು ಸಾವಿರ ಜನರಿಗೆ ಉದ್ಯೋಗ ನೀಡುವ ಗುರಿ ಇದೆ. ಈ ನಿಟ್ಟಿನಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅಭಿಮಾನಿಗಳ ಬಳಗ ಪರೀಕ್ಷೆ ‌ಪಾಸಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ವಿಷಯ. ಪ್ರೊ. ರಂಗಪ್ಪ ಅವರಂತಹ ವಿಜ್ಞಾನಿ ಸಮಾಜಕ್ಕೆ ಬೇಕು. ಈಗಾಗಲೇ ರಂಗಪ್ಪ ಅವರಿಗೆ ಸಾಕಷ್ಟು ಪ್ರಶಸ್ತಿ ಹಾಗೂ ಹೊಸ ಹೊಸ ಜವಾಬ್ದಾರಿ ಸಿಕ್ಕಿದೆ. ಅವರ ಹುಮ್ಮಸ್ಸು ನಮಗೂ ಪ್ರೇರಣೆ ಎಂದರು.

ಪ್ರೊ.ಕೆ.ಎಸ್. ರಂಗಪ್ಪ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಆಗಿ ಕಾರ್ಯ‌ ನಿರ್ವಹಿಸಿದ್ದರು. ಈ ವೇಳೆ ಎರಡು ವಿವಿಗಳನ್ನು ಎತ್ತರಕ್ಕೆ ಬೆಳೆಸಿದ್ದರು. ಇವರು ಹಾಕಿಕೊಟ್ಟ ಅನೇಕ ಯೋಜನೆಗಳು ಇಂದು ಫಲ ನೀಡುತ್ತಿವೆ. ಈ ಬಳಗ ಹೆಸರಿಗಷ್ಟೇ ಇರದೆ ಪ್ರೊ.ಕೆ.ಎಸ್.ರಂಗಪ್ಪ ಅವರ ಹೆಸರಿನಲ್ಲಿ ಸಾಕಷ್ಟು ಸಮಾಜಮುಖಿ ನ ಕಾರ್ಯ ಮಾಡುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಯನ್ನು ಕೊಡುತ್ತಿದೆ. ಇಂತಹ ಸಮಾಜಪರ ಕೆಲಸಗಳನ್ನು ಹೀಗೆ ಮುಂದುವರಿಸಲಿ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾರೈಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ನನ್ನ ಹೆಸರಿನಲ್ಲಿ ಬಳಗ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿ ಎಂದು ಸಲಹೆ ನೀಡಿದ್ದೇನೆ. ಕಳೆದ ಕೋವಿಡ್ ಸಮಯದಲ್ಲಿ ಡಿ ಗ್ರೂಪ್ ನೌಕರರಿಗೆ ಈ ಬಳಗ ಆರ್ಥಿಕ ಸಹಾಯ ಮಾಡಿತ್ತು. ಸ್ವಾರ್ಥ ಇಲ್ಲದೆ ಸಮಾಜಮುಖಿಯಿಂದ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.

ವಾಣಿಜ್ಯ ವಿಭಾಗದ ಡೀನ್‌‌‌ ಪ್ರೊ. ರಾಜಶೇಖರ್, ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.‌ಶ್ರೀಕಂಠ ಸ್ವಾಮಿ, ವಿವಿ ವಿಶೇಷಾಧಿಕಾರಿ ಚೇತನ್, ಡಾ.ಚಂದ್ರನಾಯ್ಕ್ ,  ರಂಗಪ್ಪ ಅಭಿಮಾನಿಗಳ ಬಳಗ ಅಧ್ಯಕ್ಷ ಕುಮಾರ್ ಕೆ.ಎಸ್. ಅಪ್ಪಾಜಿಗೌಡ ಸೇರಿದಂತೆ ಇತರರು ಹಾಜರಿದ್ದರು.

key words : Mysore-university-rangappa–ex-vc-hemanth.kumar-vc-uom-calendar

ENGLISH SUMMARY…

Aim to provide jobs to 2,000 people every year through the ‘Career Hub’: UoM VC
Mysuru, January 13, 2022 (www.justkannada.in): “Many students face a doubt what next, after completion of the exams. That is why the University of Mysore has opened a ‘Career Hub’, to guide the students on their career selection,” opined Prof. G. Hemanthkumar, Vice-Chancellor, University of Mysore.
He took part in a new year calendar release program held at the Vignana Bhavana, in Manasagangotri campus, organized by the ‘Abhimani Balaga,’ today.
In his address, he informed that the University aims to provide jobs to 2,000 people every year through the Career Hub. “It is indeed happy to see that the students who have passed in various courses are being guided by the Prof. K.S. Rangappa Abhimanigala Balaga. Society needs a scientist like Prof. K.S.Rangappa, who has already won many awards and is getting involved in several new responsibilities. His enthusiasm is an inspiration for us,” he added.
Prof. Rajashekar, Dean, Department of Commerce, Prof. Srikantaswamy, Environmental Sciences Department, UoM Special Officer Chethan, Dr. Chandranayak, Rangappa Abhimanigala Balaga President Kumar K.S., Appajigowda and others were present.
Keywords: Prof. Rangappa Abhimanigala Balaga/ University of Mysore/ Prof. G. Hemanth Kumar/ Career Hub