ಮೈಸೂರು,ಆ,1,2019(www.justkannada.in): ಬಿಜೆಪಿಯವ್ರು ಟಿಪ್ಪು ಜಯಂತಿ ಮಾಡೋದು ಬೇಕಾಗಿಲ್ಲ. ನಾವು ಯಾವುದೇ ಸರ್ಕಾರವನ್ನ ಟಿಪ್ಪು ಜಯಂತಿ ಮಾಡಿ ಅಂತಾ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ತನ್ವೀರ್ ಸೇಠ್, ಈಗ ಟಿಪ್ಪು ಜಯಂತಿ ರದ್ದು ಮಾಡಿರೋದು ನಮಗೆ ಬೇಸರವಿಲ್ಲ. ಬಿಜೆಪಿ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡುತ್ತೆ ಅನ್ನೋ ನಿರೀಕ್ಷೆ ಮದ್ಲೇ ಇತ್ತು.ಕಳೆದ ಮೈತ್ರಿ ಸರ್ಕಾರ ಕೂಡ ಕಳೆದ ಬಾರಿ ಟಿಪ್ಪು ಜಯಂತಿಯನ್ನ 144 ಸೆಕ್ಷನ್ ಜಾರಿ ಮಾಡಿ ನಾಲ್ಕು ಗೋಡೆ ಮಧ್ಯ ಮಾಡಿತ್ತು.ನಾವು ಯಾವುದೇ ಸರ್ಕಾರವನ್ನ ಟಿಪ್ಪು ಜಯಂತಿ ಮಾಡಿ ಅಂತಾ ಕೇಳಿಲ್ಲ ಎಂದು ಹೇಳಿದರು.
ರಾಜಕೀಯ ಉದ್ದೇಶಕ್ಕಾಗಿ ಟಿಪ್ಪು ಜಯಂತಿಯನ್ನ ಬಳಸಿಕೊಳ್ತಿದ್ದಾರೆ. ಟಿಪ್ಪು ಎಂತಾ ವ್ಯಕ್ತಿ ಅನ್ನೋದನ್ನ ಇತಿಹಾಸ ನೋಡಿ ತಿಳಿದುಕೊಳ್ಳಲಿ. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಯಾವುದೇ ಸರ್ಕಾರಗಳಿಂದ ಟಿಪ್ಪು ಜಯಂತಿ ಮಾಡಬೇಕಾಗಿಲ್ಲ. ನಾವು ಕಳೆದ 29 ವರ್ಷಗಳಿಂದ ಟಿಪ್ಪು ಜಯಂತಿಯನ್ನ ಆಚರಿಸುತ್ತಾ ಬಂದಿದ್ದೇವೆ. ಇನ್ನು ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆ. ಇಂದು ಟಿಪ್ಪು ಸುಲ್ತಾನ್ 227ನೇ ಗಂಧ ಉರುಸ್ ಷರೀಫ್ ಆಚರಿಸುತ್ತಿದ್ದೇವೆ. ಇವತ್ತು ಶ್ರೀರಂಗಪಟ್ಟಣದಲ್ಲಿರೋ ಟಿಪ್ಪು ಘೋರಿಗೆ ಗಂಧ ಉರುಸ್ ಷರೀಫ್ ಆಚರಿಸಿ ಬಂದಿದ್ದೆವೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
Key words: We have- not – any government- Tipu Jayanti- Congress –MLA- Tanveer Saith,