ಮೈಸೂರು,ಜನವರಿ,21,2022(www.justkannada.in): ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಶೇ.60ರಷ್ಟು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದ್ದು, ಸಂಪೂರ್ಣ ಜಿಲ್ಲಾಧಿಕಾರಿ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.
ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಎಸಿ ಸೇರಿ ಇನ್ನಿತರ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಇನ್ನೂ ಕೆಲವರು ಪರೀಕ್ಷೆಗೊಳಗಾಗಿ ವರದಿಗಾಗಿ ಕಾಯುತ್ತಿದ್ದಾರೆ. ಸಿಬ್ಬಂದಿಗೆ ಸೋಂಕು ಬಂದ ಹಿನ್ನಲೆಯಲ್ಲಿ ಇಂದು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದ್ದು, ನಾಳೆ ಹಾಗೂ ನಾಡಿದ್ದು ಕಚೇರಿಗೆ ರಜೆ ಘೋಷಿಸಲಾಗಿದೆ. ಸೋಮವಾರದ ತನಕವೂ ಕಚೇರಿಯಲ್ಲಿ ಕೆಲಸ ಕಾರ್ಯ ಸ್ಥಬ್ತಗೊಳಿಸಲಾಗಿದೆ.
ಈ ಮೂಲಕ ಕೊರೊನಾ ಹೊಡೆತಕ್ಕೆ ಮೈಸೂರು ಜಿಲ್ಲಾಡಳಿತ ಸ್ತಬ್ಧವಾಗಿದ್ದು ಸಾರ್ವಜನಿಕರು ಸಿಬ್ಬಂದಿಗಳಿಲ್ಲದೇ ಜಿಲ್ಲಾಧಿಕಾರಿ ಕಚೇರಿ ಬಿಕೋ ಎನ್ನುತ್ತಿದೆ.
Key words: 60% staff – Mysore DC Office – Covid.