ಬೆಂಗಳೂರು,ಜನವರಿ,21,2022(www.justkannada.in): ಕೈಮಗ್ಗ ಅಭಿವೃದ್ಧಿ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಬ ಮುನೇನಕೊಪ್ಪ ಅವರು ಇಂದು ಜವಳಿ ನೀತಿಯಡಿ ಸರ್ಕಾರದ ಸಬ್ಸಿಡಿ ಸಹಾಯಧನದೊಂದಿಗೆ ಹಿರಿಯೂರಿನಲ್ಲಿ ಪ್ರಾರಂಭಗೊಂಡು ಕಾರ್ಯ ನಿರ್ವಹಿಸುತ್ತಿರುವ BINARY APPAREL PARK PVT LTD, ಹಿರಿಯೂರು, ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಗಾರ್ಮೆಂಟ್ ಘಟಕದಲ್ಲಿ ಗ್ರಾಮೀಣ ಪ್ರದೇಶದ 2.500 ಕ್ಕೂ ಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದು, ಈ ಸಮಯದಲ್ಲಿ ಕಾರ್ಯನಿರತ ಮಹಿಳೆಯರೊಂದಿಗೆ ಚರ್ಚಿಸಿದರು. ಈ ವೇಳೆ ಎಂಎಲ್ಸಿ ನವೀನ್ ಕಡಿಮೆ. ಎಸ್. ಕೈಮಗ್ಗ ಅಭಿವೃದ್ಧಿ & ಜವಳಿ ಇಲಾಖೆಯ ಆಯುಕ್ತ ಟಿ.ಹೆಚ್.ಎಂ.ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು, ಗಾರ್ಮೆಂಟ್ ಘಟಕದ ಮುಖ್ಯಸ್ಥರು ಉಪಸ್ಥಿತರಿದ್ದರು.
Key words: Minister -Shankara Patilla Muneenakoppa -discussed – staff – Garment Unit.