ಬೆಂಗಳೂರು, ಜನವರಿ 22,2022(www.justkannada.in): ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಸಮಸ್ಯೆಗಳು ಹಾಗೂ ನ್ಯಾಯಾಲಯದ ವಿಚಾರಗಳಿಗೆ ಸಂಬಂಧಿಸಿದ ಅಂತರರಾಜ್ಯ ಜಲ ವಿವಾದ ಕುರಿತು ವರ್ಚುಯಲ್ ಸಮ್ಮೇಳನದಲ್ಲಿ ಭಾಗಿಯಾಗಲಿದ್ದು, ರಾಜ್ಯ ಸ್ಪಷ್ಟ ನಿಲುವು ತಳೆಯಲು ಸಭೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ. ದೆಹಲಿಯಿಂದ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿಗಳು, ಎ. ಜಿ ಹಾಗೂ ನೀರಾವರಿ ತಾಂತ್ರಿಕ ತಜ್ಞರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ನೀರಾವರಿ ವಿಚಾರದಲ್ಲಿ ಮಧ್ಯಸ್ಥರದ ರಾಜ್ಯವಾಗಿದೆ. ನಮ್ಮ ಮೇಲೆ ಹಾಗೂ ಕೆಳಗಿರುವ ರಾಜ್ಯಗಳು ಆಗಾಗ್ಗೆ ವ್ಯಾಜ್ಯಗಳನ್ನು ಹೂಡುತ್ತಾರೆ. ಟ್ರಿಬ್ಯುನಲ್ ಆದೇಶಗಳು ಈಗಾಗಲೇ ಬಂದಿದೆ.cm bommai
ಕೃಷ್ಣ ನದಿಗೆ ಸಂಬಂಧಿಸಿದ ಬಚಾವತ್ ಆದೇಶ ಹಾಗೂ ಬ್ರಿಜೇಶ್ ಮಿಶ್ರಾ ಆದೇಶವೂ ಬಂದಿದ್ದು, ಅಧಿಸೂಚನೆ ಹೊರಡಿಸಬೇಕಿದೆ. ಮಹದಾಯಿ ಟ್ರಿಬ್ಯುನಲ್ ಆದೇಶ ಬಂದರೂ ಸಹ ಪುನಃ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣವಿದೆ. ಕರ್ನಾಟಕವೂ ಸೇರಿದಂತೆ ಮೂರೂ ರಾಜ್ಯಗಳು ಹಂಚಿಕೆಯಾಗಿರುವ ನೀರಿನ ಬಗ್ಗೆ ತಮ್ಮ ತಕರಾರುಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಟ್ರಿಬ್ಯುನಲ್ ಆದೇಶವಾಗಿ ಅಧಿಸೂಚನೆ ಆದರೂ ಕೂಡ ಮೇಕೆದಾಟು ಒಳಗೊಂಡಂತೆ ತಮಿಳುನಾಡು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಇವೆಲ್ಲವುಗಳ ಬಗ್ಗೆ ಈಗಾಗಲೇ ಸಭೆಗಳಾಗಿದ್ದು, ಇಂದು ವರ್ಚುಯಲ್ ಸಭೆ ನಡೆಯಲಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆಗಳ ಪರಿಹಾರಕ್ಕೆ ಗಂಭೀರವಾಗಿ ಪ್ರಯತ್ನ ಗಳನ್ನು ಮಾಡಲಾಗುವುದು. ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲಾಗುವುದು ಎಂದರು.
Key words: Water Disputes Virtual Conference -CM Basavaraja Bommai
English Summary…
Virtual conference on Inter-State water dispute: Helpful to arrive at a clear stand – CM Basavaraj Bommai
Bengaluru, January 22, 2022 (www.justkannada.in): Chief Minister Basavaraj Bommai today informed that a virtual conference is on the cards to discuss the Krishna and Kaveri river water disputes and it will help in arriving at a clear stand.
Speaking to the media persons today, he informed that senior advocates representing the State, Advocate General, and irrigation technical experts would participate in the virtual conference. “Our state is in the middle, hence the neighboring states have inculcated a habit of filing cases frequently when it comes to sharing the river water. As all of you know, the tribunals have already given several orders. The Bachawat order and Brijesh Mishra orders concerning the Krishna river are also pronounced, only notification is pending. Though the tribunal orders have been announced concerning the Mahadayi river water sharing, a case has been put in the Hon’ble Supreme Court again. All these matters will be discussed in the virtual meeting, and serious efforts will be made to find solutions to the problems,” he informed.
Keywords: Inter-State river water dispute/ virtual meeting/ Chief Minister Basavaraj Bommai