ಬೆಂಗಳೂರು,ಜನವರಿ,24,2022(www.justkannada.in): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದು ಈ ನಡುವೆ ಸಚಿವಾಕಾಂಕ್ಷಿಗಳ ಲಾಬಿ ಜೋರಾಗುತ್ತಿದೆ. ಈ ನಡುವೆ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸಹ ತಮಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸಚಿವ ಸಂಪುಟದಲಲ್ಲಿ ಒಂದೆರಡು ಸಮಾಜದವರೇ ಜಾಸ್ತಿ ಇದ್ದಾರೆ. ಉಳಿದವರು ಕೇವಲ ಮತಹಾಕಲು ಮಾತ್ರ ಇದ್ದೀವಾ ಎಂದು ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ತಿಪ್ಪಾರಡ್ಡಿ, ಸಚಿವ ಸಂಪುಟ ಪುನರಚನೆ ಮಾಡುವಲ್ಲಿ ಲೋಪವಾಗಿದೆ. ತಕ್ಷಣವೇ ಸಂಪುಟ ವಿಸ್ತರಣೆ ಮಾಡಿದರೇ ಸೂಕ್ತ. ಈ ಬಾರಿ ನನಗೆ ಅವಕಾಶ ಸಿಗುವ ಆಶಾಭಾವನೆ ಇದೆ. ನನ್ನ ಹಿರಿತನವನ್ನ ಹೈಕಮಾಂಡ್ ಪರಿಗಣಿಸುತ್ತೆ ಎಂದು ಭಾವಿಸಿದ್ದೇನೆ ಎಂದರು.
ಪಕ್ಷಕಕೆ ಮುಜುಗರ ಆಗುವ ರೀತಿ ವರ್ತಿಸಲ್ಲ. ಈ ಬಾರಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ. ನನ್ನ ಹಿರಿತನಕ್ಕೆ ಸ್ಥಾನಕೊಡಲಿಲ್ಲ ಎಂಬ ಅಸಮಾಧಾನವಿದೆ. ಹಲವು ಸಮುದಾಯಗಳಲ್ಲಿ ಅಸಮಾಧಾನ ಇದೆ ಎಂದರು.
Key words: MLA -GH Thippareddi –minister-position