ಬೆಂಗಳೂರು,ಜನವರಿ,24,2022(www.justkannada.in): ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಭೇಟಿಯಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಚುನಾವಣೆ ಭಘೊಷಣೆಯಾದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಓಡಿ ಹೋಗುತ್ತಾರೆ ಎಂದು ವಲಸಿಗ ಸಚಿವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಶಾಶಕ ಬಸನಗೌಡ ಪಾಟೀಲ್ ಯತ್ನಾಳ್, ಸಂಪುಟ ವಿಸ್ತರಣೆ ಮಾಡುವುದಾದರೇ ಈಗಲೇ ಮಾಡಿ ಉತ್ತರ ಪ್ರದೇಶಲ್ಲಿ ಆದ ರೀತಿ ಇಲ್ಲ ಆಗೋದು ಬೇಡ, ಇಲ್ಲಿ ಅಧಿಕಾರ ಅನುಭವಿಸಿ ಅಲ್ಲಿಗೆ ಹೋಗುವುದು ಬೇಡ. 15 ದಿನದೊಳಗೆ ಸಂಪುಟ ಪುನರಚನೆ ಮಾಡಲಿ ಆ ನಂತರ ಮಾಡಿದರೇ ಏನು ಉಪಯೋಗವಿದೆ. ಯತ್ನಾಳ್ ಜಾರಕಿಹೊಳಿ ಬೇಕು ಅಂತಾ ಹುಡುಕಿದರೇ ಸಿಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗುತ್ತದೆ. ಹೀಗಾಗಿ ಈಗಲೇ ಎಚ್ಚೆತ್ತುಕೊಂಡು ಸಂಪುಟ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಭೇಟಿಯಾಗಿ ಟಿಕೆಟ್ ಬುಕ್ ಮಾಡಿದ್ದಾರೆ. ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಹೋಗುತ್ತಾರೆ. ಉತ್ತರ ಪ್ರದೇಶದಂತೆ ಎಲ್ಲರೂ ಹೊರ ಹೋಗುತ್ತಾರೆ. ಹೊರಗಿನಿಂದ ಬಂದವರಿಗೆ ಪಕ್ಷ ನಿಷ್ಟೆ ಇಲ್ಲ ಎನ್ನಲ್ಲ. ಕೆಲವರಿಗೆ ಪಕ್ಷ ನಿಷ್ಠೆ ಇಲ್ಲ. ನಿಷ್ಠಾವಂತರಿಗೆ ಅವಕಾಶ ನೀಡಿ ಎಂದು ಯತ್ನಾಳ್ ಒತ್ತಾಯಿಸಿದರು.
ನನ್ನ ಟಾರ್ಗೆಟ್ ಬಿಎಸ್ ವೈ ಬಿವೈ ವಿಜಯೇಂದ್ರ. ರೇಣುಕಾಚಾರ್ಯ ವಿರುದ್ಧ ಅಲ್ಲ. ಎಂಪಿ ರೇಣುಕಾಚಾರ್ಯ ವಿರುದ್ಧ ನಾನು ಮಾತನಾಡಿಲ್ಲ ಎಂದು ಶಾಸಕ ಯತ್ನಾಳ್ ತಿಳಿಸಿದರು.
Key words: MLA- yatnal-minister-position