ಮೈಸೂರು,ಜನವರಿ,25,2022(www.justkannada.in): ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಸೋಂಕು ಗರಿಷ್ಠ ಮಟ್ಟ ದಾಟಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲೆಯಲ್ಲಿ ಸೋಂಕು ಗರಿಷ್ಠ ಮಟ್ಟ ದಾಟಿದೆ. ಬಾಕಿ ಉಳಿದಿದ್ದ ಕೊರೋನಾ ಪರೀಕ್ಷಾ ವರದಿಯನ್ನ ಕಳೆದ ಮೂರು ದಿನಗಳಲ್ಲಿ ನೀಡಲಾಗಿದೆ. ಹಾಗಾಗಿ ಮೂರು ದಿನಗಳಿಂದ ಹೆಚ್ಚಿನ ಮಟ್ಟದ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಆದರೆ ಇಂದಿನಿಂದ ಆಯಾ ದಿನಗಳ ಪಾಸಿಟಿವ್ ವರದಿಗಳನ್ನ ನೀಡಲಾಗುವುದು ಎಂದು ತಿಳಿಸಿದರು.
ಶಾಲೆಗಳಿಗೆ ರಜೆ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಆದೇಶ ಆಗಿದೆ. ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿಯು ಶಾಲೆಯಲ್ಲಿ ಕಂಡು ಬರುವ ಕೇಸ್ ಗಳನ್ನ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಕಮಿಟಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇರುತ್ತಾರೆ. ಈ ಹಿಂದೆ ಜಿಲ್ಲೆಯ ಶಾಲೆಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಆದರೆ ಈಗ ಆ ಬಗ್ಗೆ ಕಮಿಟಿ ನಿರ್ಧಾರ ಮಾಡುತ್ತೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾಹಿತಿ ನೀಡಿದರು.
Key words: mysore-DC-Bagadi gowtham-corona
ENGLISH SUMMARY…
The corona cases in the district has crossed the maximum limit: Mysuru DC
Mysuru, January 25, 2022 (www.justkannada.in): The Corona cases in the Mysuru District have crossed the maximum limit, according to Deputy Commissioner Dr. Bagadi Gowtham.
Speaking in Mysuru today, the Deputy Commissioner informed that the report of the remaining Corona cases has been provided in the last three days. “It is noticed that the maximum number of positive cases have been reported in these three days. From today, positive reports will be given on the same day,” he said.
“Regarding announcing holiday to schools, orders have been issued at the government level. A committee is formed at the local level, which will decide by monitoring the number of cases in each school. The Committee comprises officials from the Education and Health Department. Earlier, permission was given to the Deputy Commissioners to announce holidays to schools. But now the Committee will decide,” he explained.
Keywords: Mysuru District/COVID-19 Pandemic/ cases/ maximum/ Deputy Commissioner/ Dr. Bagadi Gowtham