ಬೆಂಗಳೂರು,ಆ,1,2019(www.justkannada.in): ಐಎಂಎ ಕಂಪನಿಯಿಂದ ಹೂಡಿಕೆದಾರರಿಗೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗೆ ಎಸ್ಐಟಿ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಿತು.
ಪ್ರಕರಣ ಸಂಬಂಧ ಹೈ ಕೋರ್ಟ್ ವಿಭಾಗೀಯ ಪೀಠದಲ್ಲಿ ಪ್ರಕರಣದ ಪಿಐಎಲ್ ವಿಚಾರಣೆ ನಡೆಯುತ್ತಿದ್ದು ಎಸ್ ಐಟಿ ಸಲ್ಲಿಸಿದ ತನಿಖಾ ಪ್ರಗತಿ ವರದಿಯನ್ನ ಹೈಕೋರ್ಟ್ ನ್ಯಾಯಾಪೀಠ ಪರಿಶೀಲನೆ ಮಾಡಿತು.
ಕೆಪಿಐಎಡಿ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರದ ಅಧಿಕಾರಿ ಹಾಜರಾಗಿ ಕೈ ಗೊಂಡ ಕ್ರಮಗಳ ಬಗ್ಗೆ ಪ್ರಮಾಣ ವರದಿಸಲ್ಲಿಸಿದರು. ಪೊರೇನ್ಸಿಕ್ ಆಡಿಟ್ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೈ ಕೋರ್ಟ್ ಗೆ ಸರ್ಕಾರದ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವಡ್ಗಿ ತಿಳಿಸಿದರು . ಸಿರಿಯಸ್ ಫ್ರಾಡ್ ತನಿಖಾ ಏಜೆನ್ಸಿಯಿಂದಲೂ ತನಿಖೆಯಾಗುತ್ತಿದೆ ಎಂದು ಎಸ್ಐಟಿ ಪರ ವಕೀಲರರು ಹೈಕೋರ್ಟ್ ಗೆ ಮಾಹಿತಿ ನೀಡಿದರು.
ಇದೇ ವೇಳೆ ತನಿಖಾ ಪ್ರಗತಿ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿಡಿ ಕೋರ್ಟ್ ಮುಂದಿನ ಆದೇಶದವರೆಗೆ ಲಕೋಟೆ ತೆರೆಯದಂತೆ ಹೈ ಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ಹೈಕೋರ್ಟ್ ಮುಖ್ಯ ಪೀಠ ನಿರ್ದೇಶನ ನೀಡಿತು.
ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವ ಮನವಿ ಪಿಐಎಲ್ ವಿಚಾರ ಸಂಬಂಧ, ಸದ್ಯ ಎಸ್ಐಟಿ ತನಿಖೆಯಲ್ಲಿ ಪ್ರಗತಿಯನ್ನ ಗಮನಿಸಿದ್ಧೇವೆ. ಇಡಿ ಎಸ್ಐಟಿ ಪರಸ್ಪರ ಪೂರಕವಾಗಿ ತನಿಖೆಯನ್ನ ನಡೆಸಲಿ. ಆಸ್ತಿ ಜಪ್ತಿ ಮಾಡಿರುವ ವಿವರವನ್ನ ಪರಸ್ಪರ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿ ಹೈಕೋರ್ಟ್ ವಿಚಾರಣೆಯನ್ನ ಆಗಸ್ಟ್ 20 ಕ್ಕೆ ಮುಂದೂಡಿಕೆ ಮಾಡಿದೆ.
Key words: Fraud Case – IMA Company-Submission –Investigation- Progress- Report – SIT – High Court