ಮೈಸೂರು,ಜನವರಿ,25,2022(www.justkannada.in): ಹಾಲಿನ ದರ ಹೆಚ್ಚಳ ಪ್ರಸ್ತಾವನೆ ತಿರಸ್ಕಾರ ಹಿನ್ನಲೆ, ಸರ್ಕಾರದ ನಿರ್ಧಾರಕ್ಕೆ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಆರ್.ಚಲುವರಾಜು ಖಂಡನೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್.ಚಲುವರಾಜು, ಕೊರೊನಾ ಹೊಡೆತದಿಂದ ರೈತರು ಅರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಹೈನುಗಾರಿಕೆಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ರೈತರ ಮೇಲೆ ರಾಜ್ಯ ಸರ್ಕಾರ ಅಸಡ್ಡೆ ಭಾವನೆ ತೋರುತ್ತಿದೆ. ಹಾಲಿನ ದರ ಏರಿಕೆ ಮಾಡದೇ ನಿರ್ಲಕ್ಷ್ಯ ವಹಿಸಿದೆ. ಪಶು ಆಹಾರ, ವೈದ್ಯಕೀಯ ಹಾಗೂ ಕೃಷಿ ಸಲಕರಣೆಗಳ ದರ ಹೆಚ್ಚಾಗಿದೆ. ರೈತರಿಗೆ ಪ್ರತೀ ಲೀಟರಿಗೆ 26 ರೂ. ನೀಡಲಾಗ್ತಿದೆ. ಹಾಗಾಗಿ ಹೈನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದರ ಹೆಚ್ಚಳಕ್ಕೆ ಹಾಲು ಒಕ್ಕೂಟ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದರೆ ಗ್ರಾಹಕರಿಗೆ ತೊಂದರೆ ಎಂದು ಸರ್ಕಾರ ಪ್ರಸ್ತಾವನೆಯನ್ನ ತಿರಸ್ಕರಿಸಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಕೂಡಲೇ ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವಂತೆ ಆರ್.ಚಲುವರಾಜು ಒತ್ತಾಯ ಮಾಡಿದ್ದಾರೆ.
Key words: Condemnation – government- decision – milk price