ನವದೆಹಲಿ,ಫೆಬ್ರವರಿ,2,2022(www.justkannada.in): ಕೆಮಿಕಲ್ ಮುಕ್ತ ಕೃಷಿಗೆ ಸಾಕಷ್ಟು ಒತ್ತು ನೀಡುವುದು ನಮ್ಮ ಉದ್ಧೇಶವಾಗಿದೆ. ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಬಜೆಟ್ ಕುರಿತು ಸಂವಾದ ನಡೆಸಿದರು. ಬಜೆಟ್ ನ ಫೋಕಸ್ ಬಡವರು ಮತ್ತು ಮಧ್ಯಮವರ್ಗವಾಗಿದೆ . ಈ ವರ್ಷ 4 ಕೋಟಿ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಪೂರೈಕೆ. ನದಿ ಜೋಡಣೆ ವ್ಯವಸ್ಥೆ ಬಗ್ಗೆ ಬಜೆಟ್ ನಲ್ಲಿ ಘೋಷಿಸಲಾಗಿದೆ .ಆಧುನಿಕ ಭಾರತವನ್ನ ನಾವೆಲ್ಲಾ ನಿರ್ಮಿಸಬೇಕಿದೆ. ದೇಶದ ರೈತರ ಜೀವನ ಬದಲಾಗಬೇಕು. ಭಾರತ ದೇಶ ಬಡತನ ಮುಕ್ತವಾಗಬೇಕು. ಹಿಂದಿನ ಸರ್ಕಾರಗಳ ತಪ್ಪು ನಿರ್ಣಯಗಳನ್ನ ಸರಿಪಡಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಭಾರತ ಆರ್ಥಿಕತೆಯಲ್ಲಿ ದೊಡ್ಡದೇಶಗಳಂತೆ ಮುನ್ನುಗ್ಗುತ್ತಿದ್ದೇವೆ. ದೇಶದ ಆರ್ಥಿಕ ವ್ಯವಸ್ಥೆಯ ಗಾತ್ರ ಹೆಚ್ಚಾಗಿದೆ. ಹೊಸ ಸಂಕಲ್ಪಗಳನ್ನ ಮಾಡುವ ಸಮಯ ಇದಾಗಿದೆ. ಈ ಬಜೆಟ್ ಬಡವರು ಯುವಕರಿಗೆ ಸೌಲಭ್ಯ ಒದಗಿಸುತ್ತದೆ. ಬಡವರಿಗೆ 80 ಲಕ್ಷ ಮನೆಗಳು ನಿರ್ಮಾಣವಾಗಲಿವೆ ಎಂದರು.
ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಲಾಗಿದೆ. ಕೆಮಿಕಲ್ ಮುಕ್ತ ಕೃಷಿಗೆ ಸಾಕಷ್ಟು ಒತ್ತು. ನೈಸರ್ಗಿಕ ಕೃಷಿಗೆ ಆದ್ಯತೆ ನೀಡೋದು ನಮ್ಮ ಉದ್ಧೇಶವಾಗಿದೆ. ಔಷಧಿ ಸಿಂಪಡಣೆಗಾಗಿ ಕಿಶಾನ್ ಡ್ರೋಣ್ ಬಳಕೆ ಮಾಡಲಾಗುತ್ತದೆ. ಕೃಷಿ ಆಧುನೀಕರಣಗೊಳಿಸುವ ಅವಶ್ಯಕತೆ ಇದೆ. ಭಾರತ ಮತ್ತಷ್ಟು ಸದೃಢವಾಗಿ ನೋಡಲು ವಿಶ್ವ ಭಯಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: Prime Minister- Modi-Budget