ಮೈಸೂರು,ಆ,2,2019(www.justkannada.in): ಅರಣ್ಯ ರಸ್ತೆಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಕರಪತ್ರ ವಿತರಣೆ ಮೂಲಕ ಅರಿವು ಮೂಡಿಸಿದರು.
ಅಂತರ ರಾಜ್ಯ ಚೆಕ್ ಪೋಸ್ಟ್ ಬಳಿ ಪ್ರಯಾಣಿಕರಿಗೆ ಅರಣ್ಯ ರಸ್ತೆಯಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಅರಣ್ಯ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿ ಕೇರಳ ಕರ್ನಾಟಕ ಚೆಕ್ ಪೋಸ್ಟ್ ಬಳಿ ಅರಣ್ಯ ಸಿಬ್ಬಂದಿಗಳು ಪ್ರಯಾಣಿಕರಿಗೆ ಕರಪತ್ರ ವಿತರಣೆ ಮಾಡಿ ಅರಿವು ಮೂಡಿಸಿದರು.
ಎಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಬಳಿಯೂ ಸಹ ಇಂಗ್ಲೀಷ್ ಕನ್ನಡ ಹಾಗೂ ಮಲಯಾಳಿ ಭಾಷೆಗಳಲ್ಲಿರುವ ಕರಪತ್ರ ವಿತರರಣೆ ಮಾಡಿ, ವೇಗದ ಚಾಲನೆ, ಪ್ಲಾಸ್ಟಿಕ್ ಬಿಸಾಡುವುದು ಹಾಗೂ ಅರಣ್ಯ ಮಧ್ಯೆ ವಾಹನ ನಿಲ್ಲಿಸದಂತೆ ಎಚ್ಚರಿಕೆ ನೀಡಿದರು. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
Key words: hd kote-Awareness – rules – followed – forest- road