ಕರೆಯದೆ ನಾ ಊಟಕ್ಕೆ ಹೋಗಲ್ಲ, ಸಿಂಹ ನನ್ನ ಚಿಕ್ಕ ತಮ್ಮ ; ಬಿಜೆಪಿ ಶಾಸಕ ಎಸ್,ಎ,ರಾಮದಾಸ್

 

ಮೈಸೂರು, ಫೆ.04, 2022 : (www.justkannada.in news ) ಮೋದಿ ಯುಗ್ ಉತ್ಸವದ ಸಂದರ್ಭದಲ್ಲಿ ಕೈಗೊಂಡ ಅಭಿವೃದ್ಧಿ ಕಲ್ಪನೆಗಳ ಅನುಷ್ಠಾನ. ಮೈಸೂರಿನ ಕೆ.ಆರ್.ಕ್ಷೇತ್ರದ ಅತ್ಯಾಧುನಿಕ ಪಾರ್ಕ್ ನಿರ್ಮಾಣ. ಪರಿಕಲ್ಪನೆ ಆಧಾರಿತ 16 ಪಾರ್ಕ್ ಗಳ ಅಭಿವೃದ್ಧಿ ಸರ್ಕಾರದಿಂದ ಅಸ್ತು. 24ಕೋಟಿ ವೆಚ್ಚದಲ್ಲಿ ‌16 ಪಾರ್ಕ್ ಗಳ ಅಭಿವೃದ್ಧಿ.

ಕನಕದಾಸ, ಪುರಂದರದಾಸ, ಅಂಬೇಡ್ಕರ್, ಆಕಾಶವಾಣಿ, ಯೋಗ, ವಿಜ್ಞಾನ, ಸಾಮರಸ್ಯ, ಸ್ಪೋರ್ಟ್ಸ್, ಮಹಿಳೆ, ಮಕ್ಕಳು ಸೇರಿದಂತೆ ವಿಷಯಾಧಾರಿತ ಪಾರ್ಕ್ ನಿರ್ಮಾಣ.

ವಿವಿಧ ವಿನ್ಯಾಸವುಳ್ಳ, ಸಿಸಿಟಿವಿ, ನೀರಿನ ವ್ಯವಸ್ಥೆ, ಯೋಗಮಂಟಪ, ಅತ್ಯಾಧುನಿಕ ಶೌಚಾಲಯ, ಜಿಮ್ ಉಪಕರಣ, ಸುಸಜ್ಜಿತ ಪುಟ್ ಫಾತ್ ಗಳನ್ನು ಒಳಗೊಂಡ ಪಾರ್ಕ್. ಎಲ್ಇಡಿ ಸ್ಕ್ರೀನ್, ಸಂಗೀತ ಕೇಳಿಸುವ ಉಪಕರಣಗಳ ಅಳವಡಿಕೆ.

ಸದ್ಯ 16 ಪಾರ್ಕ್ ಅಭಿವೃದ್ಧಿಗೆ ಕ್ರಮವಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ 92ಪಾರ್ಕ್ ಗಳ ಅಭಿವೃದ್ಧಿ. ಅಲ್ಲದೇ ಕೆ.ಆರ್.ಕ್ಷೇತ್ರದಲ್ಲಿ ಅತ್ಯುನ್ನತವಾಗಿ ಸ್ಮಶಾನ ನಿರ್ಮಾಣ. ಹಿರಿಯ ನಾಗರಿಕರಿಗಾಗಿ ನಾಲ್ಕು ಡೇ ಕೇರ್ ಸ್ಥಾಪನೆ. ಮೈಸೂರಿನಲ್ಲಿ ಇಂದು ನಡೆದ
ಸುದ್ದಿಗೋಷ್ಠಿಯಲ್ಲಿ  ಶಾಸಕ ಎಸ್.ಎ.ರಾಮದಾಸ್ ಹೇಳಿಕೆ.

ಸಚಿವ ಸಂಪುಟ ವಿಸ್ತರಣೆ ವಿಚಾರ ; 

ಇದರ ಬಗ್ಗೆ ನನಗೆ ಗೊತ್ತಿಲ್ಲ. ಮಂತ್ರಿ ಮಾಡುತ್ತಾರಾ ಬಿಡುತ್ತಾರಾ ಗೊತ್ತಿಲ್ಲ. ಮೈಸೂರಿನಲ್ಲಿ ಶಾಸಕ ಎಸ್ ಎ ರಾಮದಾಸ್ ಹೇಳಿಕೆ. ಮಂತ್ರಿ ಸ್ಥಾನ ಕೊಟ್ಟರೇ ರಾಜ್ಯ ಸುತ್ತಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ನನ್ನಿಂದ ಸರ್ಕಾರಕ್ಕೆ ಉಪಯೋಗವಾಗುವ ಕೆಲಸ ಮಾಡುತ್ತೇನೆ. ಕರೆದಾಗ ಮಾತ್ರ ಊಟಕ್ಕೆ ಹೋಗುತ್ತೇನೆ. ಕರೆಯದೆ ಊಟಕ್ಕೆ ಹೋಗುವವನು ನಾನಲ್ಲ. ಮಂತ್ರಿ ಮಂಡಲ ವಿಸ್ತರಣೆ ಬೇಕಾ ಬೇಡವಾ ಅನ್ನೋ ವಿಚಾರ. ನಾನು ರಾಜ್ಯದ ಸಿಎಂ ಅಲ್ಲ ಈಗಾಗಿ ನನಗೆ ಗೊತ್ತಿಲ್ಲ. ಸ್ಥಳೀಯರಿಗೆ ಸಚಿವ ಸ್ಥಾನ ನೀಡುವ ವಿಚಾರ. ಚಾಣಕ್ಯನ ಕಾಲ ಕಾಮರಾಜರ ಕಾಲದಿಂದಲೂ ಸ್ಥಳೀಯರಿಗೆ ಆದ್ಯತೆ. ಸಿಎಂ ಬುದ್ದಿವಂತರಿದ್ದಾರೆ, ಸಮರ್ಥರಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಮೈಸೂರಿನಲ್ಲಿ ಶಾಸಕ ಎಸ್ ಎ ರಾಮದಾಸ್ ಹೇಳಿಕೆ.

ಗ್ಯಾಸ್ ಲೈನ್ ಪೈಪ್ ಅಳವಡಿಕೆ ವಿಚಾರ :

ನಾನು ಯೋಜನೆ ವಿರೋಧಿ ಅಲ್ಲ. ಆ ವಿಷಯ ಚರ್ಚೆ ಮಾಡೋಣ ಅಂತಾ ಅಷ್ಟೇ ಹೇಳಿದ್ದೆ. ಮೈಸೂರಿನಲ್ಲಿ ಶಾಸಕ ಎಸ್.ಎ ರಾಮದಾಸ್ ಹೇಳಿಕೆ. ಈ ವಿಚಾರವಾಗಿ ನಾನು ಮಾಧ್ಯಮದ ಮುಂದೆ ಏನನ್ನು ಹೇಳುವುದಿಲ್ಲ. ಸಂಸದ ಪ್ರತಾಪಸಿಂಹ ನನ್ನ ಚಿಕ್ಕ ತಮ್ಮನ ರೀತಿ. ಅವರ ಜೊತೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇನೆ. ನಾನು ಸಂಘರ್ಷಕ್ಕೆ ಹೋಗುವ ವ್ಯಕ್ತಿಯಲ್ಲ. ರಾಜ್ಯದ ಅಧ್ಯಕ್ಷರು ತಂದೆ ಸ್ಥಾನದಲ್ಲಿದ್ದಾರೆ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ. ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿಕೆ.

key words : Mysore-bjp-Ramadas