ಪ್ರೇಮಿಗಳ ದಿನಕ್ಕಾಗಿ ಅಮೇಜಾನ್ ನಿಂದ ಆಕರ್ಷಕ ಆಫರ್ಸ್..!

 

ಬೆಂಗಳೂರು, ಫೆ.04, 2022 : (www.justkannada.in news ) ವ್ಯಾಲೆಂಟೈನ್ಸ್ ಡೇ ( ಫೆ.14ರ ) ಪ್ರಯುಕ್ತ ಅಮೆಜಾನ್ ಅನೇಕ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ನಿಮ್ಮ ಪ್ರೇಮಿಗಳಿಗೆ ನೀವು ಇಚ್ಚಿಸುವ ತಾಜಾ ಹೂವುಗಳು, ಚಾಕೋಲೇಟ್ಸ್, ವಿಶೇಷ ಉಡುಗೊರೆ, ಮೊಬೈಲ್ಸ್, ವಾಚ್ ಎಲೆಕ್ಟ್ರೀಕ್ ಐಟಂಗಳು ಸೇರಿದಂತೆ ಎಲ್ಲಾ ಬಗೆಯ ಉಡುಗೊರೆಗಳನ್ನು ಅಮೆಜಾನ್‌ನಲ್ಲಿ ವಿಶೇಷ ಆಫರ್‌ಗಳಲ್ಲಿ ಖರೀದಿಸಲು ಅವಕಾಶ ನೀಡಿದೆ.

ಜೊತೆಗೆ ಗೃಹಾಲಂಕಾರ, ಸೌಂದರ್ಯವರ್ದಕಗಳು, ಫ್ಯಾಷನ್, ಉಡುಗೆಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ನಿಮ್ಮ ಅಮೆಜಾನ್‌ನಲ್ಲಿ ಲಭ್ಯವಿದೆ. ಮತ್ತೊಂದು ವಿಶೇಷವೆಂದರೆ ಅಮೆಜಾನ್ ಶಾಪಿಂಗ್ ಅಪ್ಲಿಕೇಷನ್‌ನಲ್ಲಿ ಅಲೆಕ್ಸಾ ಮೂಲಕ ನೇರವಾಗಿ ಆಪ್‌ಗೆ ಭೇಟಿ ನೀಡಬಹುದು. ಹೇಗೆಂದರೆ, ಆಪ್‌ನಲ್ಲಿ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ, ಅಲೆಕ್ಸಾ ಜೊತೆಗೆ ನೇರವಾಗಿ ಮಾತನಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಅಮೆಜಾನ್ ಅಪ್ಲಿಕೇಷನ್‌ಗೆ ಭೇಟಿ ನೀಡುವುದು ಸುಲಭ.

ಅಮೆಜಾನ್‌ನಲ್ಲಿ ಮತ್ತೊಂದು ವಿಶೇಷತೆ ಎಂದರೆ ಇದೇ ಫೆ.7 ರವರೆಗೂ “ಸೂಪರ್ ವ್ಯಾಲ್ಯೂ ಡೇಸ್‌ನನ್ನು ಆಚರಿಸಲಾಗುತ್ತಿದೆ. ಈ ಕೊಡುಗೆಯಲ್ಲಿ ಅಗತ್ಯ ವಸ್ತುಗಳು, ವೈಯಕ್ತಿಕ ಆರೈಕೆ, ಮಗು ಮತ್ತು ಸಾಕು ಪ್ರಾಣಿಗಳ ಆರೈಕೆಯ ವಸ್ತುಗಳ ಮೇಲೆ ಶೇ.45ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ. ಅದೂ ಅಲ್ಲದೆ, ತಾಜಾ ದಿನಸಿಗಳು 1 ರೂಪಾಯಿಂದಲೂ ಆರಂಭವಾಗುತ್ತಿದೆ. 2,500 ರೂಗೂ ಹೆಚ್ಚಿನ ವಹಿವಾಟು ನಡೆಸಿದರೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹಾಗೂ ಕ್ರೆಡಿಟ್ ಇಎಂಐ ಮೇಲೆ ಶೇ.10ರಷ್ಟು ತ್ವರಿತ ರಿಯಾಯಿತಿ ಇರಲಿದೆ.

key words : valentines-day-amazon-offers