ಬೆಂಗಳೂರು,ಫೆಬ್ರವರಿ,5,2022(www.justkannada.in): ಸಿ.ಎಂ ಇಬ್ರಾಹಿಂ ಒಬ್ಬ ಹಿರಿಯ ನಾಯಕರು. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿಲ್ಲ. ಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಇರ್ತಾರೆಂಬ ವಿಶ್ವಾಸವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, 2013 ರಲ್ಲಿ ಇಬ್ರಾಹಿಂ ಅವರಿಗೆ ಸಿಟ್ಟಿಂಗ್ ಎಂಎಲ್ಎ ತೆಗೆದು ಸೀಟು ಕೊಡಲಾಗಿತ್ತು. ಅಲ್ಲಿ ಅವರು ಸೋತರು. ಆದರೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ನಂತರ ಅವರನ್ನು ಎಂಎಲ್ಸಿಯನ್ನಾಗಿ ಮಾಡಿದ್ದೆವು. ನಾನೇ ಅವರನ್ನು ಸುರ್ಜೇವಾಲಾಗೆ ಭೇಟಿ ಮಾಡಿಸಿದ್ದೆ. ಆಗ ಪರಿಷತ್ ವಿಪಕ್ಷ ಸ್ಥಾನದಿಂದ ಎಸ್.ಆರ್. ಪಾಟೀಲ್ ತೆಗೆಯೋಕೆ ಅವರೇ ಹೇಳಿದ್ದರು. ಅವರನ್ನು ತೆಗೆದು ನನ್ನನ್ನು ಮಾಡಿ ಎಂದು ಬೇಡಿಕೆ ಇಟ್ಟಿದ್ದರು.
ಆಗ ಸುರ್ಜೇವಾಲಾ ಆಗ ಹಾಗೆಲ್ಲಾ ಮಾಡೋಕೆ ಆಗಲ್ಲ ಎಂದಿದ್ದರು. ಬಳಿಕ ಇಬ್ರಾಹಿಂಗೆ ಪ್ರಚಾರಕ್ಕೆ ಕರೆದಿದ್ದೆವು. ಅವರು ಪ್ರಚಾರಕ್ಕೂ ಬರಲಿಲ್ಲ. ಅವರು ಮೇಲ್ಮನೆ ಪ್ರತಿಪಕ್ಷ ಸ್ಥಾನಕ್ಕೆ ಕಣ್ಣಿಟ್ಟದರು. ಈಗ ಮೇಲ್ಮನೆ ಪ್ರತಿಪಕ್ಷ ಸ್ಥಾನ ಪಕ್ಷ ಸಂಘಟನೆ ಮಾಡಿದ ಹರಿಪ್ರಸಾದ್ ಗೆ ಕೊಡಲಾಗಿದೆ. ಈಗಲೂ ನಮಗೆ ವಿಶ್ವಾಸವಿದೆ. ಅವರು ಕಾಂಗ್ರೆಸ್ ಪಕ್ಷದಲ್ಲೇ ಇರ್ತಾರೆ ಎಂದು ಸಿ.ಎಂ ಇಬ್ರಾಹಿಂ ಬಗೆಗೆ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್ ಬದ್ಧವಿದೆ. ನನಗೆ, ನಲಪಾಡ್ಗೆ, ಖಾದರ್ಗೆ ಅವಕಾಶ ಕೊಟ್ಟಿದೆ. ರೆಹಮಾನ್ ಖಾನ್ಗೂ ಅವಕಾಶ ಕೊಟ್ಟಿದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ನಿಂದ ಅನ್ಯಾಯವಾಗಿಲ್ಲ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
Key words: CM Ibrahim – Congress- Salim Ahmed