ಹಿಜಾಬ್ ಕೇಸರಿ ಶಾಲಿನ ಗಲಭೆ ಶಾಂತವಾಗುವವರೆಗೂ ಕಾಲೇಜುಗಳಿಗೆ ರಜೆ ಘೊಷಿಸಿ- ಸಿದ್ಧರಾಮಯ್ಯ ಸಲಹೆ

 

ಬೆಂಗಳೂರು,ಫೆಬ್ರವರಿ,8,2022(www.justkannada.in): ರಾಜ್ಯದಲ್ಲಿ ಪಿಯುಸಿ, ಡಿಗ್ರಿ ಹಾಗೂ ಪಿಜಿ ತರಗತಿಗೆ ರಜೆ ಘೋಷಿಸಿ. ಹಿಜಾಬ್, ಕೇಸರಿ ಶಾಲಿನ ಗಲಭೆ ಶಾಂತವಾಗುವ ತನಕ ತರಗತಿ ಬೇಡ. ಆನ್ ಲೈನ್ ತರಗತಿ ನಡೆಸಿ ಎಂದು  ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಸಿದ್ಧರಾಮಯ್ಯ, ಹಿಜಾಬ್‌ ಕುರಿತಾಗಿ ಸಂಘಪರಿವಾರ ಈ ವಿವಾದ ಹುಟ್ಟುಹಾಕಿದೆ. ಇದೀಗ ಎಲ್ಲ ಜಿಲ್ಲೆಗಳಿಗೆ ಹಬ್ಬುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮ, ಜಾತಿ ಸುಳಿಯಬಾರದು. ಇದು ತೀವ್ರಗೊಂಡರೆ ಕಾನೂನು ಸುವ್ಯವಸ್ಥೆ ವಿಚಾರವಾಗಿದೆ.

ಅದ್ದರಿಂದ ಸರ್ಕಾರ ಕೂಡಲೇ ಪದವಿ ಪೂರ್ವ, ಪದವಿ ಹಾಗೂ ಸ್ನಾತಕ್ಕೋತ್ತರ ಕಾಲೇಜುಗಳನ್ನು ಕೂಡಲೇ ನಿಲ್ಲಿಸಿ ಆನ್‌ಲೈನ್‌ ತರಗತಿ ಆರಂಭಿಸಿ. ವಿವಾದ ತಿಳಿಯಾದ ಬಳಿಕ ತರಗತಿ ಪ್ರಾರಂಭಿಸಿ ಎಂದಿರುವ ಅವರು ಪರೀಕ್ಷಾ ಸಮಯ ಆಗಿರುವುದರಿಂದ ಆನ್‌ಲೈನ್ ಮೂಲಕ ತರಗತಿ ನಡೆಸುವಂತೆ ಸಲಹೆ ನೀಡಿದ್ದಾರೆ.

Key words: hijab-former CM-Siddaramaiah