ಮೈಸೂರು,ಫೆಬ್ರವರಿ,21,2022(www.justkannada.in): ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಹಾಗೂ ಮೈಸೂರು ವಿಶ್ವವಿದ್ಯಾಲಯದ ನಡುವೆ ಸೋಮವಾರ ಚಾರಿತ್ರಿಕವಾದ ಒಡಂಬಡಿಕೆಯೊಂದು ಏರ್ಪಟ್ಟಿತು.
ಕ್ರಾಫರ್ಡ್ ಭವನದ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭಾಂಗಣದಲ್ಲಿ ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ವಿಪುಲ್ ಕುಮಾರ್ ಒಡಂಬಡಿಕೆಗೆ ಸಹಿ ಮಾಡಿದರು.
ನಂತರ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಒಂದು ಸಂಸ್ಥೆಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಪೊಲೀಸ್ ಸಿಬ್ಬಂದಿಯ ಶೈಕ್ಷಣಿಕ ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಂಡು ಒಡಂಬಡಿಕೆ ಮಾಡಿಕೊಂಡಿರುವುದು ಸ್ವಾಗತಾರ್ಹ. ನಗರದ ಜನರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿರುವ ಪೊಲೀಸ್ ಇಲಾಖೆಯೊಂದಿಗೆ ಮಾಡುತ್ತಿರುವ ಈ ಒಪ್ಪಂದ 10 ವರ್ಷ ಇರಲಿದೆ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಪುಲ್ ಕುಮಾರ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಇಂತಹದೊಂದು ಒಪ್ಪಂದ ಆಗುವ ಮೂಲಕ ಇತಿಹಾಸ ನಿರ್ಮಿಸಲಾಗುತ್ತಿದೆ. ಯಾವುದೇ ವೃತ್ತಿ ಆರಂಭವಾಗಲಿ ಆ ನಂತರ ಶಿಕ್ಷಣಕ್ಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ನಾವ್ಯಾರು ಕೊಡುವುದಿಲ್ಲ. ಅದರಲ್ಲೂ ಪೊಲೀಸರು 24 ಗಂಟೆ ಕೆಲಸ ಮಾಡುವ ಕಾಯಕ. ಒಮ್ಮೆ ವೃತ್ತಿಗೆ ಪ್ರವೇಶಿಸಿದರೆ ಸಾಕು ಶಿಕ್ಷಣ ಬಗ್ಗೆ ಗಮನ ಹರಿಸುವುದಿಲ್ಲ. ಹಾಗಾಗಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್, ಸ್ಪೆಷಲೈಜ್ಡ್ ಕೋರ್ಸ್ ಹಾಗೂ ಸ್ನಾತಕ, ಸ್ನಾತಕೋತ್ತರ ಪದವಿ ಹಾಗೂ ಆನ್ ಲೈನ್ ಕೋರ್ಸ್ ಆರಂಭಿಸಲು ಈ ಒಪ್ಪಂದ ಆಗಿದೆ. ಹೇಗೆ? ಎಲ್ಲಿ ಶುರು ಮಾಡಬೇಕೆಂಬ ರೂಪುರೇಷೆ ಇನ್ನೂ ಸಿದ್ಧವಾಗಿಲ್ಲ ಎಂದರು.
ಕೃತಕ ಬುದ್ಧಿಮತ್ತೆ, ಅಪರಾಧ ಶಾಸ್ತ್ರ, ವಿಧಿವಿಜ್ಞಾನ ಶಾಸ್ತ್ರ, ಸೈಬರ್ ಕ್ರೈಂ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವು ವಿಷಯಗಳಲ್ಲಿ ಪೊಲೀಸರು ಕೋರ್ಸ್ ಮಾಡಬಹುದು. ಅಲ್ಲದೆ, ಇಲ್ಲಿ ಓದುತ್ತಿರುವ ಮಕ್ಕಳು ಕೆಪಿಎಗೆ ಬಂದು ಪ್ರಾಯೋಗಿಕ ತರಬೇತಿ ಬಗ್ಗೆ ಮಾಹಿತಿ ಪಡೆಯಬಹುದು. ಇದು ವಿವಿ ಹಾಗೂ ಕೆಪಿಎ ಎರಡು ಸಂಸ್ಥೆಗಳ ಬೆಳವಣಿಗೆ ದೃಷ್ಟಿಯಿಂದ ಅನುಕೂಲಕರ ವಾತಾವರಣ ನಿರ್ಮಾಣ ಮಾಡುತ್ತದೆ ಎಂದರು.
ಮೈಸೂರು ವಿವಿ ಕುಲಸಚಿವ ಪ್ರೊ ಆರ್. ಶಿವಪ್ಪ, ವಿವಿ ವಿಶೇಷಾಧಿಕಾರಿ ಡಾ.ಚೇತನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Key words: KPA-Mysore university-Agreement
ENGLISH SUMMARY….
KPA and UoM signs contract to start Certificate, Diploma courses for Police personnel
Mysuru, February 21, 2022 (www.justkannada.in): The University of Mysore and the Karnataka Police Academy (KPA) entered into a contract to provide educational opportunities to the police personnel.
Prof. G. Hemanth Kumar, Vice-Chancellor, University of Mysore, and Karnataka Police Academy Director Vipul Kumar signed the MoU, at a program held at the Education Board auditorium in Crawford Hall today.
Speaking on the occasion, Prof. G. Hemanth Kumar expressed his view that the MoU has been made keeping mind the educational activities of the police personnel. He mentioned that this MoU will be for 10 years.
In his address, Karnataka Police Academy Director Vipul Kumar said, “For the first time such an MoU is being made creating history. Whichever profession we belong to, many among us won’t give much prominence for studies once we join a job. The duty of police personnel will be round the clock. None of them thinks about education. Keeping this in mind an MoU has been entered with the University of Mysore to commence online Diploma, Certificate courses, specialized courses, and post-graduate and graduation courses. The details of how and where are yet to be decided.”
“This will help the police personnel to pursue education in artificial intelligence, criminology, forensic sciences, cybercrime, computer science, etc. Also, the students of this university can avail training at KPA, he explained.
Prof. R. Shivappa, Registrar, University of Mysore, University of Mysore Special Officer Dr. Chetan, and others were present.
Keywords: Karnataka Police Academy/ University of Mysore/ MoU/ online course/ police personnel