ಬೆಂಗಳೂರು, ಫೆಬ್ರವರಿ 23, 2022 (www.justkannada.in): ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಕ್ರಿಟಿಕ್ಸ್ ಚಾಯ್ಸ್ ಶಾರ್ಟ್ಸ್ ಆಯಂಡ್ ಸಿರೀಸ್(ಸಿಸಿಎಸ್‌ಎಸ್) ಪ್ರಶಸ್ತಿಯ 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ವಿಭಿನ್ನ ಮಾದರಿಯ ಕಥೆ, ರಾಜ್ ಬಿ. ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೀ5 ಒಟಿಟಿಯಲ್ಲಿ ಬಿಡುಗಡೆಯಾದ ಮೂರೇ ದಿನದಲ್ಲಿ ಈ ಸಿನಿಮಾ ದಾಖಲೆ ಬರೆದಿತ್ತು.
ಮೊದಲ ಮೂರು ದಿನಗಳಲ್ಲಿ ಒಟ್ಟು 8 ಕೋಟಿ ನಿಮಿಷ ವೀಕ್ಷಣೆಯನ್ನು ಈ ಸಿನಿಮಾ ಕಂಡಿತ್ತು. ಬಾಲಿವುಡ್ ನಿರ್ದೇಶಕರಾದ ಅನುರಾಗ್ ಕಶ್ಯಪ್ ಹಾಗೂ ರಾಮ್ ಗೋಪಾಲ್ ವರ್ಮಾ ಕೂಡ ಮೆಚ್ಚುಗೆ ಮಾತುಗಳನ್ನಾಡಿದ್ದರು.
‘ಗರುಡ ಗಮನ ವೃಷಭ ವಾಹನ’ ಸಿನಿಮಾವು ಸಿಸಿಎಸ್‌ಎಸ್ ಪ್ರಶಸ್ತಿಯ ಅತ್ಯುತ್ತಮ ಚಲನಚಿತ್ರ ವಿಭಾಗಕ್ಕೆ ನಾಮನಿರ್ದೇಶನಗೊಂಡಿದೆ. ಮಲಯಾಳಂನ ‘ನಾಯಾಟ್ಟು’ ಹಾಗೂ ‘ದಿ ಗ್ರೇಟ್ ಇಂಡಿಯನ್ ಕಿಚನ್’, ತಮಿಳಿನ ‘ಜೈ ಭೀಮ್’ ಸೇರಿದಂತೆ ಒಟ್ಟು 10 ಸಿನಿಮಾಗಳು ಈ ವಿಭಾಗಕ್ಕೆ ನಾಮನಿರ್ದೇಶನಗೊಂಡಿವೆ.