ಮೈಸೂರು,ಫೆಬ್ರವರಿ,25,2022(www.justkannada.in): ಹತ್ತು ವರ್ಷಗಳ ಹಿಂದೆ ದೆಹಲಿಯ ಆಂಧ್ರ ಭವನದ ಮುಂದೆ ಕೆಲವೊಂದು ಜನರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾಗ ಅಂದು ನಾನು ದೆಹಲಿಯಲ್ಲಿ ಈ ಧರಣಿ ಯಾಕೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದೆ, ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಹೋರಾಟ ನಡೆಯುತ್ತಿದೆ ಎಂದರು ಇದರ ನೇತೃತ್ವವನ್ನು ಕೆಸಿಆರ್ ರವರು ವಹಿಸಿದ್ದರು , ಈ ಕೆಸಿಆರ್ ಹಟ ಬಿಡದ ತ್ರಿವಿಕ್ರಮನಂತೆ ಹೋರಾಡಿ ಪ್ರತ್ಯೇಕ ರಾಜ್ಯವನ್ನು ಪಡೆದುಕೊಂಡು ಈಗ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿರುವುದು ಇಂದು ನಿಜಕ್ಕೂ ತೆಲಂಗಾಣ ರಾಜ್ಯದ ರೈತರ ಪಾಲಿನ ನೀರಾವರಿ ಭಗೀರಥ ಆಗಿದ್ದಾರೆ.
ನಾನು ಹಾಗೂ ನಮ್ಮ ರೈತ ಮುಖಂಡರು 14ರಂದು ರಾಷ್ಟ್ರೀಯ ಅರಿಶಿನ ಬೆಳೆಗಾರರ ಸಂಘದ ವತಿಯಿಂದ ದಕ್ಷಿಣ ಭಾರತ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅರಿಶಿನಕ್ಕೆ ವಿಧಿಸಿರುವ ಐದರಷ್ಟು ಜಿಎಸ್ಟಿ ರದ್ದುಪಡಿಸುವಂತೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧ ಗ್ಯಾರೆಂಟಿ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ವಿವಿಧ ರಾಜ್ಯಗಳ ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಇದೇ ವಿಚಾರದಲ್ಲಿ ಈಗಾಗಲೇ ತಮಿಳುನಾಡಿನ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ನಂತರದ ಸರದಿ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ರನ್ನು ಭೇಟಿ ಮಾಡಲು ಸಮಯವಕಾಶ ನಿಗದಿ ಪಡಿಸಲಾಗಿತ್ತು, ಅದರಂತೆ ತೆಲಂಗಾಣ ಮುಖ್ಯಮಂತ್ರಿಗಳ ಜೊತೆ ಚರ್ಚೆಗಾಗಿ ಫೆಬ್ರುವರಿ 16 ರಂದು ದಿನಾಂಕವೂ ನಿಗದಿಯಾಗಿತ್ತು, ವಿವಿಧ ರಾಜ್ಯಗಳ ರೈತ ಮುಖಂಡರು ರಾಜ್ಯಕ್ಕೆ ಆಗಮಿಸುವ ವಿಚಾರ ತಿಳಿದು ಇದೇ ಸಂದರ್ಭದಲ್ಲಿ ಇತರೆ ರಾಜ್ಯಗಳ ರೈತ ಮುಖಂಡರಿಗೆ ತೆಲಂಗಾಣ ಸರ್ಕಾರದ ರೈತಪರ ಯೋಜನೆಗಳು ತೋರಿಸಲು ತೆಲಂಗಾಣ ಸರ್ಕಾರದ ಭಾಗವಾಗಿರುವ ರೈತಬಂದು ಚೇರ್ಮೆನ್ ಪಲ್ಲಂ ರಾಜಶೇಖರರೆಡ್ಡಿ ನೀರಾವರಿ ಯೋಜನೆಗಳು ವೀಕ್ಷಣೆಗೆ ರೈತ ಮುಖಂಡರಿಗೆ ಅವಕಾಶ ಕಲ್ಪಿಸಿದರು ಅದರಂತೆ ನಮ್ಮ ರೈತರ ತಂಡ ಫೆಬ್ರವರಿ 14-15 ರಂದು ಸರ್ಕಾರದ ವಿವಿಧ ನೀರಾವರಿ ಯೋಜನೆಗಳಿಗೆ ಭೇಟಿಕೊಟ್ಟು ಅಧ್ಯಯನ ಮಾಡಿ ಇಲ್ಲಿನ ವರದಿ ವಿವರಿಸಲು ಅವಕಾಶ ಕಲ್ಪಿಸಿತು ಅದಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ.
ವರ್ಷದಲ್ಲಿ ಕೆಲವು ತಿಂಗಳು ಮಾತ್ರ ನೀರು ಹರಿದು ಭೂ ಪ್ರದೇಶದಿಂದ ಕೆಳಗೆ ಹರಿಯುತ್ತಿದ್ದ ಗೋದಾವರಿ ನದಿ ನೀರು ಉಪಯೋಗವಿಲ್ಲದಂತೆ ಅಗಿದ್ದ ಗೋದಾವರಿ ನದಿಗೆ ಕಾಳೇಶ್ವರ ಪ್ರದೇಶದಲ್ಲಿ 1.6 ಕಿಲೋಮೀಟರ್ ಉದ್ದದ ಬ್ಯಾರೇಜ್ ನಿರ್ಮಾಣ ಮಾಡಿ ನೀರು ತಡೆದು ಈ ಬ್ಯಾರೇಜ್ ಗೆ 84 ಗೇಟುಗಳ ಅಳವಡಿಸಿ ನೀರನ್ನು ಬರದ ನಾಡಿಗೆ ಹರಿಸಲು ಮುಖ್ಯಮಂತ್ರಿ ಯೋಜನೆ ರೂಪಿಸುತ್ತಾರೆ. ಕೇವಲ ಮೂರು ವರ್ಷದಲ್ಲಿ 38 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಅನುಕೂಲ ಕಲ್ಪಿಸುತ್ತಾರೆ ಇಲ್ಲಿಂದ ಹೈದರಾಬಾದ್ ನಗರಕ್ಕೆ 30 ಟಿಎಂಸಿ ಕುಡಿಯುವ ನೀರಿಗಾಗಿ 20ಟಿಎಂಸಿ ಕೈಗಾರಿಕೆಗಳ ಬಳಕೆಗಾಗಿ ಯೋಜನೆ ಕಾರ್ಯಗತವಾಗುತ್ತದೆ ಕೇವಲ ಮೂರು ವರ್ಷದಲ್ಲಿ 285 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಯೋಜಿಸಿದ ಈ ಯೋಜನೆ ಇಡೀ ಪ್ರಪಂಚದಲ್ಲಿ ಮಾದರಿಯ ಕಾರ್ಯವಾಗಿದೆ, ಕಾಳೇಶ್ವರ ನೀರಾವರಿ ಯೋಜನೆ ಇದಾಗಿದ್ದು ಇದು ನದಿಗೆ ಅಡ್ಡಲಾಗಿ ಬ್ಯಾರೆಜ್ ನಿರ್ಮಾಣ ಮಾಡಿ ನೀರನ್ನು ತಡೆದು 125 ಕಿಲೋಮೀಟರ್ ತನಕ ಭಾರಿ ಗಾತ್ರದ ಮೋಟರ್ ಪಂಪುಗಳ ಮೂಲಕ ಅರ್ಧ ಕಿಲೋ ಮೀಟರ್ ಎತ್ತರದ ಪ್ರದೇಶಕ್ಕೆ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆ ಇದಾಗಿದೆ ಹೊಸದಾಗಿ ಬೃಹತ್ ಗಾತ್ರದ ಅಣೆಕಟ್ಟೆ ನಿರ್ಮಿಸಿ ನೀರನ್ನು ಏತನೀರಾವರಿ ಮೂಲಕ ನೀರು ತುಂಬಿಸಲು ಯೋಜನೆ ಜಾರಿ ಮಾಡಿದ್ದಾರೆ ಸುಮಾರು 9’50 ಕಿಲೋಮೀಟರ್ ಉದ್ದದ ಸುರಂಗ ಮಾರ್ಗದಲ್ಲಿ ಬಾರಿ ಕೊಳವೆಗಳ ಮೂಲಕ ನೀರು ಹರಿಸಿಕೊಂಡು ವಿದ್ಯುತ್ ಉತ್ಪಾದನೆಯ ಘಟಕ ಆರಂಭಿಸಿದ್ದಾರೆ 50ಸಾವಿರ ಹೆಚ್ ಪಿ ಸಾಮರ್ಥ್ಯದ ಮೋಟರ್ ಪಂಪ್ ಗಳ ಮೂಲಕ ಪ್ರತಿ ಸೆಕೆಂಡಿಗೆ 50ಸಾವಿರ ಲೀಟರ್ ನೀರನ್ನು ಪ್ರತಿ ಮೋಟರ್ ಇಂದ ಪ್ರತಿನಿತ್ಯ ಅರ್ಧ ಟಿಎಂಸಿ ಯಷ್ಟು ನೀರನ್ನು ಜಲಾಶಯಕ್ಕೆ ತುಂಬಿಸಲಾಗುತ್ತದೆ ಪ್ರತಿಯೊಂದು ಅಣೆಕಟ್ಟೆಯಲ್ಲಿ 17ಕ್ಕೂ ಹೆಚ್ಚು ಪಂಪುಗಳನ್ನು ಅಳವಡಿಸಿದ್ದಾರೆ ಈ ರೀತಿ ಮಾಡುವುದರಿಂದ ಒಂದೊಂದು ಅಣೆಕಟ್ಟೆಯಲ್ಲಿ ಸುಮಾರು 3 ಟಿಎಂಸಿ ನೀರು ಪ್ರತಿನಿತ್ಯ ಬಳಕೆಗೆ ಸಿಗುತ್ತದೆ ಈ ಯೋಜನೆಗೆ ಏಳಕ್ಕೂ ಹೆಚ್ಚು ಅಣೆಕಟ್ಟುಗಳನ್ನು ಕಟ್ಟಲಾಗಿದೆ ನದಿಯಲ್ಲಿ ನೀರು ಹೆಚ್ಚುವರಿ ಬಂದಾಗ ಈ ನೀರನ್ನು ಬಳಸಿಕೊಳ್ಳಲಾಗುತ್ತಿದೆ ವಿಶೇಷವೆಂದರೆ ಅರಣ್ಯ ಸಂಪತ್ತು ರಕ್ಷಿಸಲು ಹಾಗೂ ಗಣಿ ಪ್ರದೇಶದ ಕಾಪಾಡಲು ಹಾಗೂ ಸುಲಭವಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಸುರಂಗಮಾರ್ಗದ ಕಾರ್ಯ ನಡೆಸಲಾಗಿದೆ ಎನ್ನುತ್ತಾರೆ ಜಲಾಶಯದ ನಿರ್ಮಾಣದ ಅಧಿಕಾರಿಗಳು ಕೆಳಭಾಗದಲ್ಲಿ 9:50 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸಿ ಕೆಳಗಿನಿಂದ ಮೇಲಕ್ಕೆ ಅರ್ಧ ಕಿಲೋ ಮೀಟರ್ ನಷ್ಟು ಎತ್ತರಕ್ಕೆ ನೀರನ್ನ ಎತ್ತುವಳಿ ಮಾಡಿ ಜಲಾಶಯ ಭರ್ತಿ ಮಾಡಲಾಗುತ್ತದೆ ಇಲ್ಲಿನ ಕಾರ್ಯಗಳನ್ನು ವರ್ಣಿಸಲು ಅಸಾಧಾರಣವಾಗಿದೆ. ಕಾರ್ಯಯೋಜನೆ ಕೈಗೆತ್ತಿಕೊಂಡ ಮೂರು ವರ್ಷಗಳು ಮುಖ್ಯಮಂತ್ರಿ ಕೆಸಿಅರ್ ಅವರು ದಿನನಿತ್ಯ ಕಾಮಗಾರಿ ಪ್ರಗತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಣೆ ಮಾಡಿ ಪರಿಶೀಲಿಸಲಾಗುತ್ತಿದರು ಎನ್ನುತ್ತಾರೆ ಅಧಿಕಾರಿಗಳು ಇದರ ಸಂಪೂರ್ಣ ಯೋಜನೆಗೆ 80ಸಾವಿರ ಕೋಟಿ ಹಣ ಖರ್ಚು ಮಾಡಿದ್ದಾರೆ. ಏತ ನೀರಾವರಿ ಅಣೆಕಟ್ಟೆಗಳನ್ನು ನಿರ್ಮಿಸುವಾಗ ಕೆಲವು ಹಳ್ಳಿಗಳನ್ನು ಸ್ಥಳಾಂತರಿಸಲಾಗಿರುತ್ತದೆ ಅಂತಹವರಿಗೆ ಸರ್ಕಾರ ವ್ಯವಸಾಯಕ್ಕೆ ಭೂಮಿ ವಾಸಮಾಡಲು ಎರಡು ಕೊಠಡಿಯ ಮನೆಗಳನ್ನು ನಿರ್ಮಿಸಿ ಪುನರ್ವಸತಿ ನಿರ್ವಾಣ ಕಲ್ಪಿಸಿಕೊಟ್ಟಿದೆ
ಗೋದಾವರಿ ನದಿ ನೀರನ್ನ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಂದ ಮಾಡಿಕೊಂಡು ನೀರನ್ನು ಸದ್ಬಳಕೆ ಮಾಡಿಕೊಳ್ಳುತಿವೆ, ಇದೇ ರೀತಿ ಕಾವೇರಿ ವಿಚಾರದಲ್ಲಿ ತಮಿಳುನಾಡು ಕರ್ನಾಟಕ ಸರ್ಕಾರಗಳು ಮಾತುಕತೆಯ ಮೂಲಕ ಯಾಕೆ ಬಗೆಹರಿಸಿಕೊಳ್ಳಬಾರದು ಮೇಕೆದಾಟು ಯೋಜನೆಯಾಗಲಿ ಅಥವಾ ಹೊಗನೇಕಲ್ ವಿವಾದವಾಗಲಿ ಎಲ್ಲದಕ್ಕೂ ಆಸ್ಪದವಿಲ್ಲದಂತೆ ಆಗುತ್ತದೆ ಇದನ್ನು ಎರಡು ರಾಜ್ಯಗಳ ರೈತರು ಸರ್ಕಾರಗಳು ವೀಕ್ಷಣೆ ಮಾಡಿ ಅರಿತುಕೊಂಡರೆ ಈ ಕಾರ್ಯ ಸಾಧಿಸಬಹುದು,
ತೆಲಂಗಾಣ ಸರ್ಕಾರ 2018ರಿಂದ ರೈತ ರಕ್ಷಾ ಯೋಜನೆ ಜಾರಿಗೆ ತಂದಿದ್ದು ಕಳೆದ ನಾಲ್ಕು ವರ್ಷಗಳಿಂದ ರೈತರ ಕೃಷಿ ಚಟುವಟಿಕೆಗಳಿಗೆ ಗೊಬ್ಬರ ಬೀಜ ಖರೀದಿಸಲು ಅನುಕೂಲವಾಗಲಿ ಎಂದು ಪ್ರತಿ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 5 ಗುಂಟೆ ಜಮೀನಿದ್ದರೂ ಸಹ ಪ್ರತಿವರ್ಷ 10ಸಾವಿರ ರೂಪಾಯಿ ರೈತರ ಖಾತೆಗೆ ನೀಡುತ್ತಿದ್ದಾರೆ 5 ಎಕರೆ ಇರುವ ರೈತರಿಗೆ 50ಸಾವಿರ ನೀಡಲಾಗುತ್ತಿದೆ ಸಣ್ಣ ರೈತ ದೊಡ್ಡ ರೈತ ಎನ್ನುವ ತಾರತಮ್ಯವಿಲ್ಲ
ರೈತರ ಜೀವರಕ್ಷ ಜೀವ ವಿಮೆ ಪ್ರತಿ ರೈತ ಕುಟುಂಬಕ್ಕೂ ಸರ್ಕಾರವೇ 5ಲಕ್ಷ ರೂಪಾಯಿ ಜೀವ ವಿಮೆ ಮಾಡಿಸಿ ಸರ್ಕಾರವೇ ಹಣ ತುಂಬುತ್ತಿದೆ ಕುಟುಂಬದಲ್ಲಿ ಅವರು ಸ್ವಾಭಾವಿಕವಾಗಿ ಅಥವಾ ಆಕಸ್ಮಿಕವಾಗಿ ಮರಣ ಮರಣಹೊಂದಿದಾಗ ಅವರ ಕುಟುಂಬಕ್ಕೆ ನಾಮಿನಿದಾರರಿಗೆ 5ಲಕ್ಷ ರೂಪಾಯಿ 15 ದಿನದಲ್ಲಿ ಆ ಕುಟುಂಬಕ್ಕೆ ಹಣ ಜಮಾವಣೆ ಆಗುತ್ತದೆ ಈಗಾಗಲೇ ಸಹಸ್ರಾರು ರೈತ ಕುಟುಂಬ ಯೋಜನೆ ಅನುಕೂಲ ಪಡೆದಿದೆ
ತೆಲಂಗಾಣ ರಾಜ್ಯದಲ್ಲಿ 26ಲಕ್ಷ ಕೃಷಿ ಪಂಪ್ಸೆಟ್ ಗಳು 24 ಗಂಟೆಗಳ ಸತತ ಉಚಿತ ವಿದ್ಯುತ್ತನ್ನು ನೀಡಲಾಗುತ್ತಿದೆ ಇದರಿಂದ ರೈತರ ಉತ್ಪಾದನೆ ಆರ್ಥಿಕ ಗುಣಮಟ್ಟ ಹೆಚ್ಚಳವಾಗಿದೆ
ವಿಶೇಷ ವರದಿ
ಕುರುಬೂರು ಶಾಂತಕುಮಾರ್
ರಾಜ್ಯಾಧ್ಯಕ್ಷರು ರಾಜ್ಯ ಕಬ್ಬು ಬೆಳೆಗಾರರ ಸಂಘ
Key words: Telangana-KCR-kurubur shanthakumar