ಬೆಂಗಳೂರು,ಫೆಬ್ರವರಿ,25,2022(www.justkannada.in): ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕೋರಿ ಹೈಕೊರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಸಂಬಂಧ ವಾದ ಮಂಡನೆ ಮುಕ್ತಾಯವಾಗಿದ್ದು ತೀರ್ಪು ಕಾಯ್ದಿರಿಸಲಾಗಿದೆ.
ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಖಾಜಿ ಬೈಬುನ್ನಿಸಾ, ನ್ಯಾ. ಕೃಷ್ಣ ಎಸ್.ದೀಕ್ಷಿತ್ ಅವರಿದ್ಧ ಪೂರ್ಣ ಪೀಠದಲ್ಲಿ ಹಿಜಾಬ್ ವಿವಾದ ಕುರಿತು ಅರ್ಜಿ ವಿಚಾರಣೆ ನಡೆದಿದ್ದು ಅರ್ಜಿದಾರರ ಪರ ಮತ್ತು ಸರ್ಕಾರದ ಪರ ವಾದ ಮಂಡನೆ ಮುಕ್ತಾಯವಾಗಿದೆ. ಹೈಕೋರ್ಟ್ ಪೂರ್ಣ ಪೀಠ ತೀರ್ಪು ಕಾಯ್ದಿರಿಸಿದೆ.
ಹಾಗೆಯೇ ಮಧ್ಯಂತರ ಅರ್ಜಿದಾರರು ಬಯಸಿದರೆ ಲಿಖಿತ ವಾದ ಸಲ್ಲಿಸಬಹುದು ಎಂದು ಹೈಕೋರ್ಟ್ ಪೂರ್ಣಪೀಠ ತಿಳಿಸಿದೆ. ಹಿಜಾಬ್ ವಿವಾದ ರಾಜ್ಯದಲ್ಲಲ್ಲದೇ ರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಚರ್ಚೆಯಾಗಿದ್ದು ಇದೀಗ ಹೈಕೋರ್ಟ್ ತೀರ್ಪು ಕಾದು ನೋಡಬೇಕಿದೆ.
Key words: Hijab –Controversy-High Court – judgment.