ನವದೆಹಲಿ,ಫೆಬ್ರವರಿ,26,2022(www.justkannada.in): ಉಕ್ರೇನ್ ಮೇಲೆ ಮೂರನೇ ದಿನವೂ ದಾಳಿ ಮುಂದುವರೆಸಿರುವ ರಷ್ಯಾ 10ಕ್ಕೂ ಹೆಚ್ಚು ನಗರಗಳ ಮೇಲೆ ಹಿಡಿತ ಸಾಧಿಸಿದ್ದು, ರಷ್ಯಾದಾಳಿಗೆ ಉಕ್ರೇನ್ ತತ್ತರಿಸಿ ಹೋಗಿದೆ.
ಈ ಮಧ್ಯೆ ಸ್ಥಳಾಂತರ ಮಾಡುದಾಗಿ ಹೇಳಿದ್ದ ಅಮೇರಿಕಾದ ಸಹಾಯವನ್ನ ಉಕ್ರೇನ್ ಅಧ್ಯಕ್ಷ ಝೇಲೆನ್ ಸ್ಕಿ ತಿರಸ್ಕರಿಸಿದ್ದು. ನಮ್ಮನ್ನ ಸ್ಥಳಾಂತರ ಮಾಡುವುದು ಬೇಕಾಗಿಲ್ಲ ನಮಗೆ ಶಸ್ತ್ರಾಸ್ತ್ರ ನೀಡಿ ಸಹಾಯ ಮಾಡಿ. ಯುದ್ದದ ವೇಳೆ ಬೇಕಿರುವುದು ಶಸ್ತ್ರಾಸ್ತ್ರ. ನಿಮ್ಮ ಸವಾರಿ ಮಾತುಗಳಲ್ಲ ಎಂದು ಝೇಲೆನ್ ಸ್ಕಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ರಷ್ಯಾ ದಾಳಿಯಿಂದಾಗಿ ಉಕ್ರೇನ್ ನಗರಗಳು ಭಾರಿ ಹಾನಿಗೆ ಸಿಲುಕಿವೆ. ಕೀವ್ ಖರ್ಗಿವ್ ಒಡಿಸಾ ಪ್ರಾಮಾಟೋಸ್ಕ್ರ್, ಲುಟ್ಸ್ಕ್ ಸೇರಿ ಹಲವು ನಗರಗಳಲ್ಲಿ ಭಾರಿ ಹಾನಿಯುಂಟಾಗಿದೆ ಎನ್ನಲಾಗಿದೆ.
Key words: Ukraine -President- US -assistance