ಕೀವ್,ಮಾರ್ಚ್,3,2022(www.justkannada.in): ಉಕ್ರೇನ್ ಮೇಲೆ ರಷ್ಯಾ 8ನೇ ದಿನವೂ ತನ್ನ ದಾಳಿ ಮುಂದುವರೆಸಿದ್ದು ಈ ಮಧ್ಯೆ . ಖೇರ್ಸನ್ ಎಂಬ ನಗರವನ್ನ ವಶಪಡಿಸಿಕೊಂಡಿದ್ದು ಉಕ್ರೇನ್ ಜನತೆ ಅಪಾಯದಲ್ಲಿ ಸಿಲುಕಿದ್ದಾರೆ. ಇನ್ನು ಅಲ್ಲಿ ಸಿಲುಕಿರುವ ಭಾರತೀಯರನ್ನ ವಾಪಸ್ ಕರೆತರಲು ಕೇಂದ್ರ ಸರ್ಕಾರ ಹರಸಾಹಸಪಡುತ್ತಿದೆ.
ಈ ಮಧ್ಯೆ ರಷ್ಯಾ ದಾಳಿ ಬಗ್ಗೆ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಸ್ಕಿ, ಉಕ್ರೇನ್ ವಿರುದ್ಧ ಯಾರು ಗೆಲ್ಲಲೂ ಸಾಧ್ಯವಿಲ್ಲ ಎಷ್ಟ್ರೇ ಶಸ್ತ್ರಾಸ್ತ್ರ ಹೊಂದಿದ್ದರೂ ರಷ್ಯಾಗೆ ಉಕ್ರೇನ್ ಗೆಲ್ಲಲು ಆಗಲ್ಲ. ನ್ಯಾಟೋ ಸಹಕಾರ ಸಿಕ್ಕರೆ ವಿನಾಶಕಾರಿ ಯುದ್ಧ ನಡೆಯಲಿದೆ ಎಂದು ಹೇಳಿದ್ದಾರೆ.
ರಷ್ಯಾ ದಾಳಿಯಿಂದಾಗಿ ಮಾರ್ಚ್ 1ರವರೆಗೆ 752 ಯಕ್ರೇನ್ ನಾಗರೀಕರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
Key words: Ukraine-Russia-War-Zelesky