ಬೆಂಗಳೂರು,ಮಾರ್ಚ್,3,2022(www.justkannada.in): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆಯ ಸಮಾರೋಪ ಇಂದು ನಡೆಯಲಿದ್ದು ಈ ಮೂಲಕ ಪಾದಯಾತ್ರೆ ಅಂತ್ಯವಾಗಲಿದೆ. ಆದರೆ ಮೇಕೆದಾಟು ಯೋಜನೆ ಹೋರಾಟವನ್ನ ಮುಂದುವರೆಸುವುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಿದ್ಧರಾಮಯ್ಯ, ಕಾಂಗ್ರೆಸ್ ಐತಿಹಾಸಿಕ ಪಾದಯಾತ್ರೆ ಇಂದು ಅಂತ್ಯವಾಗುತ್ತಿದೆ. ಬೆಂಗಳೂರು ಜನರಿಗೆ ಕುಡಿವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮುಂದಿನ 50 ವರ್ಷಗಳಿಗಾಗಿ ಈ ಯೋಜನೆ ಜಾರಿ ಮಾಡಬೇಕು.
ನಮ್ಮ ಸರ್ಕಾರ ಇದ್ದಾಗಲೇ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದವು. ಆದರೆ ಗೋವಿಂದ ಕಾರಜೋಳ ಯೋಜನೆ ಅನುಷ್ಟಾನಕ್ಕೆ ವಿಳಂಬ ಮಾಡಿ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಮೇಕೆದಾಟು ಹೋರಾಟ ನಾವು ಇಲ್ಲೆಗೆ ಅಂತ್ಯ ಮಾಡಲ್ಲ ಜನರ ಬಳಿಗೆ ಹೋಗುತ್ತೇವೆ ಜನರ ಮಧ್ಯೆ ಹೋರಾಟ ಮಾಡುತ್ತೇವೆ ಎಂದು ನುಡಿದರು.
Key words: mekedatu plan-fight-Former CM-Siddaramaiah.
ENGLISH SUMMARY…
It is not the end of the struggle for the Mekedatu project: We will go to the people –Siddaramaiah
Bengaluru, March 3, 2022 (www.justkannada.in): The valedictory of the second phase of the protest march taken out by the State Congress leaders against the State Government demanding implementation of the Mekedatu project will conclude today. Former Chief Minister Siddaramaiah has said that they will continue their struggle.
Speaking about their padayatra, Siddaramaiah observed that the Congress party’s historic padayatra is concluding today. “We are fighting to provide water for the people of Bengaluru. This project is required to meet the water needs of the city for the next 50 years. Our government had prepared the DPR for this project. But the present Water Resources Minister Govind Karajola is purposefully delaying this project and is misleading the people by telling lies. We won’t stop our protest we will go to the people and fight with them,” he said.
Keywords: Former CM Siddaramaiah/ Mekedatu project/ padayatra/ HC shock