ಬೆಂಗಳೂರು,ಮಾರ್ಚ್,4,2022(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡುತ್ತಿದ್ದು ಹೊಸ ಕಾರ್ಯಕ್ರಮಗಳ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಮಧ್ಯೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈ ಕುರಿತು ಮಾತನಾಡಿ ಆರ್ ಎಸ್ ಎಸ್ ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಮೊದಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಡವರಿಗೆ ಯಾವ ಯಾವ ಕಾರ್ಯಕ್ರಮ ಕೊಡ್ತಾರೆ ನೋಡಬೇಕು. ಬೊಮ್ಮಾಯಿ ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ಬಜೆಟ್ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ನೀರಿಕ್ಷಯನ್ನ ಈಡೇರಿಸಲು ಅನುಮತಿ ಕೊಡಬೇಕಲ್ವಾ..? ಕಾರ್ಯಕ್ರಮಗಳನ್ನ ಕೊಡಲು ಹಿಂದೆ ಇರುವವರು ಬಿಡಬೇಕಲ್ವಾ..? ಎಂದು ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ನೀರಾವರಿ ಯೋಜನೆಗೆ ಯಾರ್ಯಾರು ಎಷ್ಟು ಕೊಡುಗೆ ನೀಡಿದ್ದಾರೆ ಚರ್ಚೆ ಮಾಡೋಣಾ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಏನು ನಡೆದಿದೆ ಗೊತ್ತು. ಈ ಬಗ್ಗೆ ಸಮಯ ಸಿಕ್ಕಾಗ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೆಚ್.ಡಿಕೆ ತಿಳಿಸಿದರು.
Key words: CM Bommayi –budget-Former CM-H.D kumaraswamy