ಗೋವಾದಲ್ಲಿ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ ಹೆಗಲಿಗೆ..

ಬೆಂಗಳೂರು,ಮಾರ್ಚ್,8,2022(www.justkannada.in):  ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಗೋವಾಗೆ ತೆರಳಲಿದ್ದಾರೆ ಎಂದು ಮಾಹಿತಿ  ಲಭ್ಯವಾಗಿದೆ.

ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಎಐಸಿಸಿ ಮುಂದಾಗಿದ್ದು,  ಹೀಗಾಗಿ ಎಐಸಿಸಿ ಸೂಚನೆ ಮೇರೆಗೆ ಡಿ.ಕೆ. ಶಿವಕುಮಾರ್ ಗೋವಾಗೆ ತೆರಳಲಿದ್ದಾರೆ ಎನ್ನಲಾಗಿದೆ.

ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್ ​ಗೆ  ವಹಿಸಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಇರಿಸುವಂತೆ ನೋಡಿಕೊಳ್ಳಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತು ಮಾಡಿ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಗೋವಾದಲ್ಲಿ ಮೂರು ದಿನಗಳ ಕಾಲ ಉಳಿಯಲಿರುವ ಡಿ.ಕೆ ಶಿವಕುಮಾರ್ ಸರ್ಕಾರ ರಚನೆ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.

Key words: protection-Goa- Shivakumar- shoulders

ENGLISH SUMMARY…

 

Protection responsibility of Cong. MLAs given to D.K. Shivakumar
Bengaluru, March 8, 2022 (www.justkannada.in): Voting for the Assembly elections in five states of the country has been completed, and the results will be announced on March 10. Political activities have taken momentum, as a result of which KPCC President D.K. Shivakumar has visited Goa today, according to sources.
It is said that the AICC is extra alert this time to prevent poaching of MLAs like earlier. KPCC President D.K. Shivakumar has gone to Goa as per the directions of AICC.
D.K. Shivakumar has been given the responsibility of protecting the Congress MLAs in Goa. All arrangements are made to ensure that the winning horses are not poached. According to the sources, the winning candidates have been identified and are kept separately.
Keywords: KPCC/ D.K. Shivakumar/ AICC/ MLAs/ safety