ಉತ್ತರ ಪ್ರದೇಶ,ಮಾರ್ಚ್,11,2022(www.justkannada.in): ನಿನ್ನೆಯಷ್ಟೆ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಂದಿದ್ದು, ಉತ್ತರ ಪ್ರದೇಶ, ಮಣಿಪುರ, ಗೋವಾ, ಉತ್ತರಖಂಡ್ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬೀಗಿದರೇ ಪಂಜಾಬ್ ನಲ್ಲಿ ಆಪ್ ಬಹುಮತ ಪಡೆದು ಅಧಿಕಾರಕ್ಕೇರಲು ಸಜ್ಜಾಗಿದೆ.
ಈ ನಡುವೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಸೋಲಿನ ಬಗ್ಗೆ ಮಾತನಾಡಿರುವ ಯುಪಿ ಮಾಜಿ ಸಿಎಂ ಹಾಗೂ ಬಿಎಸ್ ಪಿ ನಾಯಕಿ ಮಾಯಾವತಿ, ಫಲಿತಾಂಶ ನಮ್ಮ ನಿರೀಕ್ಷೆಗೆ ತಕ್ಕಂತಿಲ್ಲ. ನಮ್ಮ ಸೋಲಿನ ಬಗ್ಗೆ ಪರಮರ್ಶಿಸುತ್ತೇವೆ. ನಾವು ಸೋತಿರಬಹುದು. ಆದರೆ ನಾವು ಹೊರಗೆ ಹೋಗಿಲ್ಲ ನಮ್ಮ ವಿರುದ್ಧ ಪಿತೂರಿ ನಡೆದಿದೆ. ಜಾತಿವಾದಿ ಶಕ್ತಿಗಳು ನಮ್ಮ ವಿರುದ್ಧ ಕೆಲಸ ಮಾಡಿವೆ.
ಆದರೂ ಬಿಜೆಪಿಯಂತೆ ನಾವು ಬದಲಾಗಿ ಬರುತ್ತೇವೆ ಬಿಎಸ್ ಪಿಯಿಂದ ಮಾತ್ರ ಬಿಜೆಪಿ ತಡೆಯಲು ಸಾಧ್ಯ ಎಂದು ಮಾಯಾವತಿ ತಿಳಿಸಿದ್ದಾರೆ.
Key words: election-result-BSP-Mayavathi