ಬೆಂಗಳೂರು,ಮಾರ್ಚ್,11,2022(www.justkannada.in): ನಿನ್ನೆಯಷ್ಟೆ ಪ್ರಕಟಗೊಂಡ ಪಂಚರಾಜ್ಯಗಳ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಮಾಜಿ ಸಿಎಂಗಳ ನಡುವೆ ಟಾಕ್ ವಾರ್ ನಡೆಯಿತು. ಬಿಎಸ್ ಯಡಿಯೂರಪ್ಪ ವಿಪಕ್ಷಗಳ ಕಾಲೆಳೆದರೇ ಅವರಿಗೆ ವಿಪಕ್ಷ ನಾಯಕ ಸಿದ್ಧರಮಯ್ಯ ತಿರುಗೇಟು ನೀಡಿದ ಪ್ರಸಂಗ ಕಂಡು ಬಂದಿತು.
ವಿಧಾನಸಭೆಯಲ್ಲಿ ಮಾತನಾಡಿದ ಬಿಎಸ್ ವೈ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು. ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬಿಎಸ್ ವೈ ಮುಕ್ತ ಬಿಜೆಪಿ ಮಾಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರೇ ಮತ್ತೆ ನೀವು ಸಿಎಂ ಆಗಲ್ಲ.
ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ರು. ಸುಮ್ನೆ ಕಣ್ಣೀರು ಬರ್ತಾದಾ..? ನೋವಾಗಿ ಕಣ್ಣೀರು ಬರೋದು. ಬಿಎಸ್ ವೈ ಇತ್ತೀಚೆಗೆ ಜನರ ಬಳಿ ಹೋಗಿಲ್ಲ ಅನ್ಸುತ್ತೆ. ನಿಮ್ಮನ್ನು ಹೊರ ಹಾಕಿದಾಗಲೇ ಜನ ನಿರ್ಧರಿಸಿದ್ದಾರೆ ಬಿಜೆಪಿಯನ್ನ ಹೊರ ಹಾಕಲು ಜನ ನಿರ್ಧರಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಬೇರೆ . ಕರ್ನಾಟಕ ಚುನಾವಣೆ ಬೇರೆ ಎಂದು ನುಡಿದರು.
ಈ ವೇಳೆ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಬಿಎಸ್ ವೈ, ನಾನು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದೆ. ಬೊಮ್ಮಾಯಿಯನ್ನ ಸಿಎಂ ಮಾಡಿದೆ. ನಾನು ಮತ್ತೆ ಸಿಎಂ ಆಗುವ ಪ್ರಶ್ನೆಯೇ ಇಲ್ಲ. 135 ಸ್ಥಾನ ಗೆದ್ದ ಮತ್ತೆ ಬಿಜೆಪಿ ಅಇಕಾರಕ್ಕೆ ತರುತ್ತೇವೆ. ವಿಪಕ್ಷ ಸ್ಥಾನದಲ್ಲಿ ಕೂರಲು ಮಾನಸಿಕವಾಗಿ ಸಿದ್ಧರಾಗಿ. ನೀವು ಶಾಶ್ವತವಾಗಿ ವಿಪಕ್ಷದಲ್ಲೇ ಇರ್ತೀರಿ. ನಾವು ಆಡಳಿತ ಪಕ್ಷದಲ್ಲೇ ಇರುತ್ತೇವೆ ಎಂದು ಕಾಲೆಳೆದರು.
ENGLISH SUMMARY….
They have made it without BSY BJP: You can’t become CM again – Siddaramaiah
Bengaluru, March 11, 2022 (www.justkannada.in): The assembly witnessed a war of words between two former Chief Ministers over the assembly election results of five states. The war of words was between former CMs B.S. Yediyurappa and Siddaramaiah.
“We will come to power in the state once again, BSY said. In his response to this, the leader of opposition in the assembly Siddaramaiah said, they have made it BJP without BSY. You can’t become a CM again.”
“BSY had tears in his eyes when he resigned. Was it artificial…? We get tears in our eyes only when we are hurt. BSY has stopped going to the people now. People have decided to oust BJP soon after you were ousted. Don’t compare my words to the UP elections. The Karnataka elections are different from it,” he added.
In his reply, B.S. Yediyurappa said, “I resigned voluntarily. I vouched for Bommai to become the CM. There is no question of me becoming a CM again. We will ensure that the BJP will win in the state again with 135 seats. Be ready to be in the opposition again. You will permanently be in the opposition and we will continue to be in power.”
Keywords: War of words/ B.S. Yediyurappa/ Siddaramaiah/ assembly
Key words: former-CM- bs yeddyurappa-Siddaramaiah