ಬೆಂಗಳೂರು,ಮಾರ್ಚ್,14,2022(www.justkannada.in): ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 238 ರನ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನ ವಶಕ್ಕೆ ಪಡೆದುಕೊಂಡಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಿಂಕ್ ಬಾಲ್ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಕ್ಲೀನ್ ಸ್ವಿಪ್ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 238 ರನ್ ಗೆ ಆಲ್ ಔಟ್ ಆಗಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಶ್ರೇಯಸ್ ಅಯ್ಯರ್ 92, ರಿಷಬ್ ಪಂತ್ 39, ಕೊಹ್ಲಿ 23 ಹನುಮ ವಿಹಾರಿ 31 ರನ್ ಬಾರಿಸಿದ್ದರು. ಶ್ರೀಲಂಕಾ ಪರ ಎಂಬುಲ್ಡೆನಿಯಾ 3 ಜಯವಿಕ್ರಮ 3 ಹಾಗೂ ದನಂಜಯ ಡಿ ಸಿಲ್ವಾ 2ವಿಕಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 109 ರನ್ ಗೆ ಆಲ್ ಔಟ್ ಆಗಿತ್ತು. ಭಾರತದ ಪರ ಉತ್ತಮ ಬೌಲಿಂಗ್ ಮಾಡಿದ ಜಸ್ಪ್ರಿತ್ ಬೂಮ್ರಾ 5 ವಿಕೆಟ್ ಅಶ್ವಿನ್, ಶಮಿ ತಲಾ ಎರಡು ವಿಕೆಟ್ ಕಿತ್ತಿದ್ದರು.
2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ 309 ರನ್ ಗೆ ಡಿಕ್ಲೇರ್ ಮಾಡಿಕೊಂಡು 447 ರನ್ ಗುರಿ ನೀಡಿತ್ತು. ಆದರೆ ಗುರಿ ಬೆನ್ನತ್ತಿದ ಶ್ರೀಲಂಕಾ 208 ರನ್ ಗೆ ಆಲ್ ಔಟ್ ಆಗುವ ಮೂಲಕ ಸರಣಿಯಲ್ಲಿ ಸೋಲೊಪ್ಪಿಕೊಂಡಿದೆ.
Key words: India –beat- Sri Lanka – 2nd Test