ಮೈಸೂರಿನಲ್ಲಿ ಮಾ.20 ರಂದು ಪರಿಸರ ಜಾಗೃತಿ ಸೈಕಲ್ ಜಾಥಾ.

ಮೈಸೂರು,ಮಾರ್ಚ್,15,2022(www.justkannada.in):  ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಮಾರ್ಚ್ 20ರ ಭಾನುವಾರ ಪರಿಸರ ಜಾಗೃತಿ ಸೈಕಲ್ ಜಾಥಾ ಆಯೋಜನೆ ಮಾಡಲಾಗಿದೆ.

ಬೇಸಿಗೆಯಲ್ಲಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳನ್ನು ಬಿಸಿಲಿನ ತಾಪಮಾನದಿಂದ ಸಂರಕ್ಷಿಸಲು ಆಹಾರ ನೀರು ಒದಗಿಸುವಂತೆ ನಾಗರೀಕರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವ ನಿಟ್ಟಿನಲ್ಲಿ  ಅಂದು ಬೆಳಗ್ಗೆ 7ರಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುಕ್ಕರಹಳ್ಳಿ ಕೆರೆಯವರೆಗೆ ಈ ಪರಿಸರ ಜಾಗೃತಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.

ಪರಿಸರ ಸೈಕಲ್ ಜಾಗೃತಿ ಜಾಥಾ ಮಾಹಿತಿಯ ಪ್ರಚಾರ ಸಾಮಗ್ರಿಗಳನ್ನು ವಿಶ್ವವಿದ್ಯಾನಿಲಯ ಆವರಣದಲ್ಲಿ ವಿವಿ ಕುಲಪತಿ  ಪ್ರೊ.ಜಿ. ಹೇಮಂತ್ ಕುಮಾರ್  ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಬೇಸಿಗೆ ಆರಂಭವಾಗಿ ತಾಪಮಾನ ಹೆಚ್ಚುವುದರಿಂದ ನೀರಿನ ಹಾಹಾಕಾರ ಎಲ್ಲೆಡೆ ಕಂಡುಬರುತ್ತದೆ. ಮನುಷ್ಯರಿಗೆ ಮಾತ್ರವಲ್ಲದೇ ಮಾತುಬಾರದ ಮೂಕ ಪ್ರಾಣಿಗಳೂ ನೀರಿಗಾಗಿ ಪರಿತಪಿಸುತ್ತಿರುತ್ತವೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನೀರಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವುದರ ಜೊತೆಗೆ ರಸ್ತೆ ಬದಿಯಲ್ಲಿ ಗಿಡ ಮರಗಳನ್ನು ನೆಟ್ಟು ನೀರಿನ  ಅರವಟ್ಟಿಗೆಗಳನ್ನು  ಇಡುತ್ತಿದ್ದರು ಎಂಬುದು ಇತಿಹಾಸದ ಶಾಸನಗಳಿಂದ ತಿಳಿಯುತ್ತದೆ. ಆದರೆ ಇಂದು ಕೆರೆ ಬಾವಿಗಳು ನೀರಿಲ್ಲದೆ ಬತ್ತಿ ಹೋಗುತ್ತಿವೆ ಅದಕ್ಕೆ ಕಾರಣ ಮಾನವ ತನ್ನ ದುರಸೆಗಳಿಗಾಗಿ ಕಾಡು ಗಿಡ ಮರಗಳನ್ನು ಕಡಿಯುತ್ತಿರುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಭೂಮಿಯಲ್ಲಿ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಆದ್ದರಿಂದ ಪರಿಸರ ಸಂರಕ್ಷಣೆ ಕಡೆ ಯುವಪೀಳಿಗೆ ಮುಂದಾಗಬೇಕು.  ನಮ್ಮೆಲ್ಲರ ಮನೆಯ ಛಾವಣಿಯಲ್ಲಿ ನೀರು ಆಹಾರ ಕೊಟ್ಟು ಸಣ್ಣಪುಟ್ಟ ಪ್ರಾಣಿಪಕ್ಷಿಗಳಿಗೆ ಆಸರೆಯಾಗೋಣ. ಇವರ ಸೈಕಲ್ ಜಾಥಾ ಅಭಿಯಾನ ಯಶಸ್ವಿಯಾಗಲಿ ಎಂದರು.

ಈ ಸಂದರ್ಭದಲ್ಲಿ  ಮೈಸೂರು ನಗರ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಜೋಗಿ ಮಂಜು ,ಮುಖ್ಯ ಅಧಿಕಾರಿ ಚೇತನ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್ ,ಅಜಯ್ ಶಾಸ್ತ್ರಿ ,ರಾಕೇಶ್ ಕುಂಚಿಟಿಗ ,ದುರ್ಗಾಪ್ರಸಾದ್ , ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.

ಸೈಕಲ್ ಜಾಥಾದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಟಿ ಶರ್ಟ್ ನೀಡಲಾಗುವುದು ಜಾಥಾಗೆ  ಭಾಗವಹಿಸುವವರು 8105078070/9880752727 ಸಂಪರ್ಕಿಸಬಹುದು.

Key words: Cycle Jatha- May 20 -Mysore

ENGLISH SUMMARY…

Cycle jatha on Mar. 20 in Mysuru to create environmental awareness
Mysuru, March 15, 2022 (www.justkannada.in): The Parisarasnehi team and KMPK Trust have jointly organized a bicycle jatha in Mysuru on March 20, 2022, to create awareness among the public about environmental conservation, as part of the ‘World Sparrow Day,’ celebrations.
The objective of the jatha is to create awareness among the people to keep water in vessels on the terrace or open spaces for the benefit of birds and small animals. The bicycle jatha will commence at 7.00 am in front of the Kote Anjaneya Swamy temple and conclude at the Kukkarahalli Lake.
Prof. G. Hemanth Kumar, Vice-Chancellor, University of Mysore, today released the information material of the bicycle jatha in the University premises.
Speaking on the occasion, he said, “In summers as the climate becomes hot water scarcity will also appear everywhere. It is not only a problem for human beings, but even animals and birds also will suffer. During ancient times, the kings used to build tanks and ponds on roadsides and other public places and also used to encourage growing trees and store water in pots. But today all the tube wells and tanks have gone dry due to the greed of human beings. The groundwater level is depleting at an alarming rate. Hence, every one of us should seriously think about environmental conservation. Let us all pledge to keep water in vessels on terraces of our houses for the benefit of birds. I wish this bicycle jatha will become successful.”
Those who participate in the bicycle jatha will be given a T-shirt. Interested persons can contact 8105078070/ 9880752727 for more details.
Keywords: Environment Awareness/ bicycle jatha/ March 20