ನವದೆಹಲಿ,ಆ,5,2019(www.justkannada.in): ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದು ಮಾಡುವ ಕೇಂದ್ರ ಸರ್ಕಾರದ ನಡೆಗೆ ಜಮ್ಮು ಕಾಶ್ಮೀರದ ಮಾಜಿ ಸಿಂ ಮೆಹಬೂಬ ಮುಫ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಕಟು ಶಬ್ದಗಳಿಂದ ಟೀಕಿಸಿದ್ದಾರೆ. ಈ ಕುರಿತು ಮಾತನಾಡಿರುವ ಮೆಹಬೂಬ ಮುಫ್ತಿ, ಇದು ಪ್ರಜಾಪ್ರಭುತ್ವದಲ್ಲೇ ಕರಾಳ ದಿನ 370ನೇ ವಿಧಿ ರದ್ದು ಮಾಡಿರುವುದು ಸಂವಿಧಾನ ಬಾಹಿರವಾದ್ದದ್ದು. ಇದರಿಂದ ವಿನಾಶಕಾರಿ ಪರಿಣಾಮಗಳು ಉಂಟಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಈ ದಿನವನ್ನು ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ ಎಂದು ಗುರುತು ಮಾಡಬಹುದು. 1947 ರಲ್ಲಿ ಜಾರಿಗೆ ತಂದಿದ್ದ ದ್ವಿರಾಷ್ಟ್ರ ಪದ್ಧತಿಯನ್ನು ಇದು ಮೂಲೆಗೆ ತೂರಿದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಮೆಹಬೂಬ ಮುಫ್ತಿ ಕಿಡಿಕಾರಿದ್ದಾರೆ.
Key words: Article 370-Cancel- Jammu and Kashmir- Former CM – Mehbooba Mufti -outraged – central government