ಮೈಸೂರು, ಮಾರ್ಚ್ 19, 2022 (www.justkannada.in): ದಿ ಕಾಶ್ಮೀರಿ ಫೈಲ್ ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತಪಡಿಸಿ ಮೈಸೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕೋಮುಗಲಭೆ ಸೃಷ್ಟಿಸುವ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಲಾಯಿತು.
ಈ ಸಿನಿಮಾಗೆ ಟ್ಯಾಕ್ಸಿ ಫ್ರೀ ಮಾಡಿದ ಸರ್ಕಾರದ ವಿರುದ್ಧ ದಸಂಸ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ಮೇಲೆ ದ್ವೇಷ ಮೂಡಿಸುವ ಪ್ರಯತ್ನಕ್ಕೆ ಸಿನಿಮಾ ಮೂಲಕ ಮುಂದಾಗ್ತಿದೆ. ಕಾಶ್ಮೀರಿ ಫೈಲ್ ಎಂಬ ಕಾಲ್ಪನಿಕ ಚಿತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಹಾಳುಮಾಡ್ತಿದೆ. ರಾಜಕೀಯ ದುರುದ್ದೇಶದಿಂದ ಗಲಭೆ ಸೃಷ್ಠಿಸಲಾಗ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
key words : dss-protest