ಹಾವೇರಿ,ಮಾರ್ಚ್,21,2022(www.justkannada.in): ಕರ್ನಾಟಕದಲ್ಲಿ ವೈದ್ಯಕೀಯ ಶುಲ್ಕ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಈ ಮೂಲಕ ವೈದ್ಯಕೀಯ ಶಿಕ್ಷಣ ಶುಲ್ಕ ಇಳಿಕೆ ಬಗ್ಗೆ ಸುಳಿವು ನೀಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಇಂದು ಹಾವೇರಿಯ ಚಳಗೇರಿ ಗ್ರಾಮಕ್ಕೆ ಭೇಟಿ ನೀಡಿ ಮೃತ ನವೀನ್ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು. ಶುಲ್ಕ ಇಳಿಕೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ದುಬಾರಿಯಾಗುತ್ತಿದೆ. ಮೆಡಿಕಲ್ ಶಿಕ್ಷಣ ಶುಲ್ಕ ಇಳಿಕೆ ಬಗ್ಗೆ ಚಿಂತನೆ ಮಾಡಲಾಗುತ್ತದೆ . ಎಬಿಸಿ ಕ್ಯಾಟಗರಿ ಮಾಡಿ ಶುಲ್ಕ ಇಳಿಕೆಗೆ ತೀರ್ಮಾನಿಸುತ್ತೇವೆ ಎಂದರು.
ನಮ್ಮಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಕಡಿಮೆ ಇದೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು. ಶೇ.95 ರಷ್ಟು ಅಂಕ ಪಡೆದವರಿಗೂ ಸೀಟ್ ಸಿಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ಆಗಬೇಕು ಎಂದರು.
Key words: CM Bommai-reduction- medical – fees – state
ENGLISH SUMMARY…
CM Bommai gives hint on reducing Medical education fee in State
Haveri, March 21, 2022 (www.justkannada.in): Chief Minister Basavaraj Bommai has informed that the State Government is contemplating on reducing the medical education fee in the State.
He visited Haveri today and paid his last respects to Naveen, who died in the Russian war attack on Ukraine. The body of Naveen has been brought to his native. Speaking to the media persons after paying his last respects, the Chief Minister informed that the medical education has become very costly in the state and hence the government is planning to reduce the fee by classifying as A, B, C category.
“The fee in our government colleges are less, compared to private colleges. We are discussing about reducing the fee. Students who have scored 95 per cent marks are also not getting medical seat. There is a need to seriously think about this,” he added.
Keywords: Chief Minister Basavaraj Bommai/ Medical education/ fee reduction