ಮೈಸೂರು,ಮಾರ್ಚ್,21,2022(www.justkannada.in): ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನವಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸಂತಸ ವ್ಯಕ್ತಪಡಿಸಿದರು.
ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಯಶಸ್ವಿ ಹಿನ್ನಲೆ, ರಂಗಾಯಣದ ಆವರಣದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ರಂಗಾಯಣದ ಕಲಾವಿದರು, ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಈ ಬಾರಿಯ ತಾಯಿ ಹೆಸರಿನ ಬಹುರೂಪಿ ಸಂಪನ್ನಗೊಂಡಿದೆ. ತಾಯಿ ವಿಚಾರಕ್ಕಾಗಿಯೇ ಹೆಚ್ಚಿನ ಜನರು ಬಹುರೂಪಿಗೆ ಬಂದಿದ್ದಾರೆ. ತಾಯಿ ಥೀಮ್ ಬಗ್ಗೆ ಸಾಕಷ್ಟು ವಾಗ್ಮಿಗಳು, ಹಿರಿಯ ಚಿಂತಕರು ಮಾತನಾಡಿದ್ದಾರೆ. ತಾಯಿ ಬಗೆಗಿನ ಕಾನ್ಸೆಪ್ಟ್ ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ. ಇತರ ರಾಜ್ಯದ ಕಲಾವಿದರು ಹಾಗೂ ರಂಗಾಸಕ್ತರು ರಂಗಾಯಣ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ದಾಖಲೆಯ ಪ್ರೇಕ್ಷಕರು ರಂಗಾಯಣಕ್ಕೆ ಭೇಟಿ ನೀಡಿದ್ದಾರೆ. ಎಲ್ಲೂ ಕೂಡಾ ಯಾವುದೇ ರೀತಿಯ ಗೊಂದಲಗಳು ನಡೆದಿಲ್ಲ. ಮುಖ್ಯಮಂತ್ರಿ ನಾಟಕಕ್ಕೆ ಕಿಕ್ಕಿರಿದು ಪ್ರೇಕ್ಷಕರು ಭಾಗಿಯಾಗಿದ್ದು ಸಂತಸದ ವಿಚಾರ. ಪ್ರಾರಂಭದಿಂದಲೂ ಉತ್ತಮ ಪ್ರಚಾರ ಸಿಕ್ಕಿದ್ದರಿಂದ ಬಹುರೂಪಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಇನ್ನು ಪುಸ್ತಕ ಮಳಿಗೆಗಳಿಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ವ್ಯಾಪಾರಸ್ಥರಿಗೂ ಒಳ್ಳೆಯ ವ್ಯಾಪಾರ ಆಗಿದ್ದು, ಹೆಚ್ಚು ಪುಸ್ತಕಾಸಕ್ತರು ಭಾಗಿಯಾಗಿದ್ದಾರೆ. ಆಹಾರ ಮೇಳದ ಬಗ್ಗೆ ಸಾರ್ವಜನಿಕರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುರೂಪಿಯನ್ನ ರಾಜ್ಯದ ಉತ್ಸವ ಎಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಜವಾಬ್ದಾರಿ ವಹಿಸಿ ಬಹುರೂಪಿ ನಡೆಸಿದ್ದೇವೆ. ಪ್ರತಿದಿನಿ ಟಿಕೇಟ್ ಮಾರಾಟದಿಂದ ಸುಮಾರು 5ಲಕ್ಷ ಹಣ ಸಂಗ್ರಹವಾಗಿದೆ.
ಕೊರೊನಾದಿಂದಾಗಿ ಕಳೆದ ವರ್ಚ ಬಹುರೂಪಿ ನಡೆಸಲು ಆಗಲಿಲ್ಲ. ಹಾಗಾಗಿ ವರ್ಷದ ಕೊನೆಯಲ್ಲಿ ಮತ್ತೊಂದು ಬಹುರೂಪಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
Key words: Rangayana-director-addanda carriappa