ಮೈಸೂರು,ಮಾರ್ಚ್,22,2022(www.justkannada.in): ಹೊಸ ಶಿಕ್ಷಣ ನೀತಿಯ ಅಂತಃಸತ್ವವೆಂದರೆ ಶಿಕ್ಷಣ ಪದ್ಧತಿಯನ್ನು ಅಮೂಲಾಗ್ರವಾಗಿ ಬದಲಾಯಿಸುವುದಾಗಿದೆ ಎಂದು ರಾಷ್ಟ್ರೀಯ ವೌಲ್ಯಾಂಕ ಮತ್ತು ಮಾನ್ಯತಾ ಷರಿಷತ್ತಿನ ನಿರ್ದೇಶಕ ಡಾ.ಎಸ್.ಸಿ. ಶರ್ಮ ತಿಳಿಸಿದರು.
ನಗರದ ಕ್ರಾಫರ್ಡ್ ಹಾಲ್ ನಲ್ಲಿ 102ನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಧಾನ ಉದ್ದೇಶವೆಂದರೆ ಈ ನಾಡಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ತನ್ಮೂಲಕ ಅವರಲ್ಲಿ ನಿಜವಾದ ಮಾನವೀಯ ಗುಣ ತುಂಬುವುದೇ ಆಗಿದೆ. ಮಕ್ಕಳು ಬೌದ್ಧಿಕ ಆಯಾಮವನ್ನು ಗಳಿಸಿಕೊಳ್ಳುವಂತೆ ಪ್ರೇರೇಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
’ಹೊಸ ಶಿಕ್ಷಣ ನೀತಿ-2020’ರ ವೈಶಿಷ್ಟ್ಯವೆಂದರೆ, ಬಹುತ್ವ, ಸಮಾನತೆ ಹಾಗೂ ಭ್ರಾತೃತ್ವ ಸ್ಥಾಪಿಸುವುದೇ ಆಗಿದೆ. ಸಾಂವಿಧಾನಿಕ ಮೌಲ್ಯಗಳ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಇದೆಲ್ಲವೂ ಒಡಮೂಡಿದೆ. ನಾನು ಮೈಸೂರು ವಿವಿಯಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದೇನೆ. ನಾನು ಒಬ್ಬ ಹಿರಿಯ ವಿದ್ಯಾರ್ಥಿಯಾಗಿ ಇಲ್ಲಿಗೆ ಆಗಮಿಸಿದ್ದೇನೆ. ಮುಖ್ಯ ಅತಿಥಿಯಾಗಿ ಅಲ್ಲ ಎಂದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಇದ್ದರು.
Key words: mysore university- NEP -Dr. S. C. Sharma
ENGLISH SUMMARY….
The objective of NEP is to bring radical changes in education system: Dr. S.C. Sharma
Mysuru, March 22, 2022 (www.justkannada.in): “The major objective of the New National Education Policy is bringing radical changes in the educational system,” opined Dr. S.C. Sharma, Director, National Evaluation and Accreditation Council.
He participated in the 102nd Convocation of the University of Mysore, held at the Crawford Hall, in Mysuru today. In his address, he said, “the objective of NEP is providing value-based education to the children of this country and instilling real human qualities among them. Inspiring students to develop intellectual dimension is the major objective.”
“Establishing plurality, equality and brotherhood are the salient features of the new National Education Policy-2020. Along with constitutional values, it includes arts, literature, music, sports, etc. I also am Ph.D. holder from the University of Mysore. I have come here as an alumni, not as a chief guest,” he said.
Governor of Karnataka Sri Thawar Chand Gehlot and University of Mysore Vice-Chancellor, Prof. G. Hemanth Kumar were present.
Keywords: University of Mysore/ Convocation/ Dr. S.C. Sharma/ NEP/ objective