ಮೈಸೂರು, ಮಾರ್ಚ್ ೨೩, ೨೦೨೨ (www.justkannada.in): “ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ೨೦೩೦ರ ಕಾರ್ಯಸೂಚಿಯನ್ನು ಸಾಧಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಬಹಳ ಮುಖ್ಯ,” ಎಂದು ಭಾರತದ ಉಪರಾಷ್ಟçಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಭಾರತೀಯ ವಿಶ್ವವಿದ್ಯಾಲಯಗಳ ಸಂಘ, ನವ ದೆಹಲಿ, ಆಯೋಜಿಸಿದ್ದ ಭಾರತೀ ವಿಶ್ವವಿದ್ಯಾಲಯಗಳ ಸಂಘದ ೯೬ನೇ ವಾರ್ಷಿಕ ಸಮಾವೇಶ ಹಾಗೂ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಮಾವೇಶವನ್ನು ಉದ್ಘಾಟಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು.
“ವಿಶ್ವ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಪ್ರಗತಿ ತೃಪ್ತಿಕರವಾಗಿಲ್ಲ, ಇನ್ನೂ ಸಾಕಷ್ಟು ಸಾಧಿಸಬೇಕಿದೆ ಎಂದು ತಿಳಿಸಿದೆ. ೨೦೨೧ರ ವರದಿಯ ಪ್ರಕಾರ ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ಡೆನ್‌ಮಾರ್ಕ್ ದೇಶಗಳು ಪಟ್ಟಿಯ ಮೊದಲ ಸ್ಥಾನಗಳಲ್ಲಿವೆ. ಆಸ್ಟ್ರೇಲಿಯಾ, ಜರ್ಮನಿ, ಯುಕೆ ಹಾಗೂ ಸ್ಪೇನ್ ರಾಷ್ಟ್ರಗಳು ಪಟ್ಟಿಯ ಮೊದಲ ೨೦ನೇ ಸ್ಥಾನಗಳಲ್ಲಿದ್ದು, ಭಾರತ ೧೨೦ನೇ ಸ್ಥಾನದಲ್ಲಿದೆ. ಇದು ಬಹಳ ಗಂಭೀರವಾಗಿ ಆಲೋಚಿಸುವ ಅಂಶವಾಗಿದೆ.
ಪೃಥ್ವಿಯನ್ನು ರಕ್ಷಿಸಲು ವಿಶ್ವದ ಎಲ್ಲಾ ರಾಷ್ಟ್ರಗಳ ಸಂಘಟಿತ ಪ್ರಯತ್ನ ಅಗತ್ಯವಿದೆ. ‘ವಸುದೈವ ಕುಟುಂಬಕಂ’ ಎನ್ನುವುದು ನಮ್ಮ ದೇಶದ ಘೋಷವಾಕ್ಯ. ಇದನ್ನು ನಾವು ಕಳೆದುಕೊಳ್ಳಲಾಗುವುದಿಲ್ಲ. ಭಾರತ ಇಡೀ ವಿಶ್ವದಲ್ಲೇ ೨ನೇ ಅತೀ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರವಾಗಿದ್ದು, ವಿಶ್ವ ಸಂಸ್ಥೆ ನಿಗಧಿಪಡಿಸಿರುವ ೨೦೩೦ರ ಕಾರ್ಯಸೂಚಿಯನ್ನು ಸಾಧಿಸಲು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆ ಅತ್ಯಗತ್ಯ,” ಎಂದು ಅಭಿಪ್ರಾಯಪಟ್ಟರು.
“ಎಸ್‌ಡಿಜಿ ಗುರಿಗಳನ್ನು ಈಡೇರಿಸಲು ಬಡತನ, ಅನಕ್ಷರತೆಯಂತಹ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಅವಶ್ಯಕ. ಎಸ್‌ಡಿಜಿಗಳನ್ನು ಸಾಧಿಸುವಲ್ಲಿ ನಮಗೆ ಎದುರಾಗುತ್ತಿರುವ ಇತರೆ ಸವಾಲುಗಳೆಂದರೆ ಅಪೌಷ್ಠಿಕತೆ, ಲಿಂಗ ಅಸಮಾನತೆ, ಸುರಕ್ಷಿತ ಕುಡಿಯುವ ನೀರಿನ ಸಮಾನ ದೊರೆಯುವಿಕೆ ಹಾಗೂ ಪರಿಸರ ಮಾಲಿನ್ಯಗಳು ಪ್ರಮುಖವಾಗಿವೆ. ಈ ಹಿನ್ನೆಲೆಯಲ್ಲಿ ಎಸ್‌ಡಿಜಿ ೨೦೩೦ರ ಕಾರ್ಯಸೂಚಿಯನ್ನು ಸಾಧಿಸುವಲ್ಲಿ ನಾವು ಇನ್ನೂ ಬಹುದೂರದ ದಾರಿಯನ್ನು ಸವೆಸಬೇಕಿದೆ,” ಎಂದರು.
“ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ನಮ್ಮ ದೇಶದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸುವಂತಹ ದಾರ್ಶನಿಕ ದಾಖಲೆಯಾಗಿದೆ. ಎನ್‌ಇಪಿ-೨೦೨೦ರ ಶಿಫಾರಸ್ಸುಗಳು ಎಸ್‌ಡಿಜಿಗಳ ಸಾಧನೆಗೆ ಪೂರಕವಾಗಿವೆ. ಇದು ಪ್ರಾಥಮಿಕ ಪೂರ್ವ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಭಾರತದ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ವ್ಯಾಪಿಸುತ್ತದೆ. ನಾವು ನಮ್ಮ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ಮರುರೂಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೂತನ ಎನ್‌ಇಪಿಯ ಪರಿಣಾಮಕಾರಿಯಾದ ಅನುಷ್ಠಾನ ನಮಗೆ ಎಸ್‌ಡಿಜಿ ಗುರಿಗಳನ್ನು ಸಾಧಿಸುವಲ್ಲಿ ಮಹತ್ತರವಾದ ಮಟ್ಟಿಗೆ ನೆರವಾಗಲಿದೆ,” ಎಂದು ವಿವರಿಸಿದರು.
Keywords: University of Mysore- Association of Indian Universities- Conference- Vice-President Venkaiah Naidu.
ENGLISH SUMMARY :
Higher Educational Institutions have a vital role to play in accomplishing SDG goals: Vice-President Venkaiah Naidu
Mysuru, March 23, 2022 : “The higher educational institutions of the country have a vital role to play in accomplishing the Sustainable Development Goals set by the United Nations and its 2030 agenda,” observed Hon’ble Vice-President of India, Sri Venkaiah Naidu.
He inaugurated the 96th Annual Conference and Universities Vice-Chancellors’ Conference, jointly organized by the Association of Indian Universities, New Delhi and the University of Mysore.
In his address, he said, “the recent United Nations report indicate that the progress achieved in this goals is uneven and more needs to be done. According to the 2021 report, the three countries Finland, Sweden and Denmark top the list. Countries like Australia, Germany, UK and Spain are in the top 20 and in the list India is in the 120th position. This is a matter that has to be taken seriously. We must remember the fact that saving the planet has to be a collective effort of all the countries. We can ill-afford to lose sight of the relevance of the adage ‘Vasudaiva Kutumbakam’ in this context. India is the 2nd largest populated country in the world. It is one of the critical countries where achievement of the sustainable development goals will be essential to realise the 2030 agenda in the next decade. Poverty, illiteracy are the major challenges we need to surmount as a society in our quest to achieve sustainable development goals. Other factors which are hindering our march towards the progress are malnutrition, gender inequality, equitable access to safe water, and environmental pollution. Thus there is a long road ahead that needs to be travelled to achieve the SDG agenda 2030.
Further, he said, the NEP-2020 is a foresighted document which is bound to transform the educational landscape of our country. Its recommendations are aligned with the SDGs, and its scope and vision encompasses overall Indian educational system from pre-primary to higher education, along with curriculum to institutions reforms in a phased manner. We need to completely overhaul our educational system. I am certain, that implementation of this NEP in letter and spirit will help us to achieve the SDG agenda.
Keywords: University of Mysore/ Association of Indian Universities/ Conference/ Vice-President Venkaiah Naidu.