ಜೇಮ್ಸ್ ಸಿನಿಮಾಗಿದ್ದ ಸಮಸ್ಯೆ ಇತ್ಯರ್ಥ: ನಾಳೆ 275 ಥಿಯೇಟರ್ ಗಳಲ್ಲಿ ಮಾತ್ರ ಪ್ರದರ್ಶನ.

ಬೆಂಗಳೂರು,ಮಾರ್ಚ್,24,2022(www.justkannada.in): ಆರ್ ಆರ್ ಆರ್ ಚಿತ್ರಕ್ಕಾಗಿ ಜೇಮ್ಸ್ ಸಿನಿಮಾ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ನಟ ಶಿವರಾಜ್​ಕುಮಾರ್​ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆ ಚರ್ಚಿಸಿದ್ದು ವಿವಾದಕ್ಕೆ ತೆರೆ ಎಳೆದಿದ್ದಾರೆ.

ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಚರ್ಚಿಸಿದ್ಧ ನಟ ಶಿವರಾಜ್ ಕುಮಾರ್ ನಂತರ ಫಿಲಂ ಚೇಂಬರ್ ಗೆ ಭೇಟಿ ನೀಡಿ ಚರ್ಚಿಸಿ ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದರು. ಇದೀಗ ಜೇಮ್ಸ್ ಸಿನಿಮಾಗಿದ್ದ ಸಮಸ್ಯೆ ಇತ್ಯರ್ಥವಾಗಿದ್ದು, 386 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ದ ಜೇಮ್ಸ್ . ನಾಳೆಯಿಂದ 275 ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರೆಸಲಿದೆ. ಈ ಮೂಲಕ ನಾಳೆಯಿಂದ 111 ಥಿಯೇಟರ್ ಗಳಿಂದ ಜೇಮ್ಸ್ ಎತ್ತಂಗಡಿಯಾಗಲಿದೆ.

ಫಿಲಂ ಚೇಂಬರ್ ಜತೆ ಚರ್ಚಿಸಿದ ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟ ಶಿವರಾಜ್ ಕುಮಾರ್, ಥಿಯೇಟರ್ ಸಮಸ್ಯೆ ಬರುತ್ತೆ-ಹೋಗುತ್ತೆ. ಮಾತುಕತೆ ಕೆಲವು ‌ಸಲ‌ ಅಗ್ರಿಮೆಂಟ್​ನಲ್ಲಿ‌ ಆಗುತ್ತೆ, ಕೆಲವು ಟೈಮ್ ಮಾತಿನ ಮೇಲೆ ನಿಂತಿರುತ್ತೆ. ಡಿಸ್ಟ್ರಿಬ್ಯೂಟರ್ ಹಾಗೂ ಎಕ್ಸಿಬ್ಯೂಟರ್​ಗಳ ಮಧ್ಯೆ ಯಾವ ರೀತಿ ಮಾತುಕತೆ ಆಗಿತ್ರೋ ಗೊತ್ತಿಲ್ಲ. ಆದರೆ, ನಾನು ಎಲ್ಲರ ಪರವಾಗಿ ನಿಲ್ಲುತ್ತೇನೆ. ಸಿಎಂ  ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ, ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

ಅಪ್ಪು ಸಿನಿಮಾ ಬಿಡುಗಡೆ ಒಂದು ಎಮೋಷನ್. ಜೇಮ್ಸ್ ಸಿನಿಮಾ ಸಮಸ್ಯೆಗೆ ಸಿಎಂ ಸ್ಪಂದಿಸಿದ್ದಾರೆ ಬೊಮ್ಮಾಯಿಗೆ  ನಾವು ಈಗ ತಪ್ಪು ಹುಡುಕುವುದು ಬೇಡ ಜೇಮ್ಸ್ ಇದ್ದ ಎಲ್ಲಾ ಸಮಸ್ಯೆಗಳು ಬಗೆಹರಿದಿದೆ. ನನ್ನ ನೇತೃತ್ದಲ್ಲಿ ಬಗೆಹರಿದಿದೆ ಎಂದು ಹೇಳಲು ಆಗಲ್ಲ ಎಲ್ಲರ ಪ್ರಯತ್ನದಿಂದ ಬಗೆಹರಿದಿದೆ ಎಂದರು.

ಫಿಲಂ ಚೇಂಬರ್ ಅಧ್ಯಕ್ಷ ಜೈರಾಜ್ ಮಾತನಾಡಿ ಚಿತ್ರಮಂದಿರಗಳ ಸಮಸ್ಯೆ ಬಗೆಹರಿದಿದೆ. ಹಲವು ಚಿತ್ರಮಂದಿರಗಳಲ್ಲಿ ಆರ್ ಆರ್ ಹಾಕಿದರು  ಥಿಯೇಟರ್ ಗಳ ಜತೆ ಮಾತನಾಡಿ ಸಮಸ್ಯೆ ಇತ್ಯಾರ್ಥ ಮಾಡಿದ್ದೇವೆ ಎಂದರು.

ENGLISH SUMMARY….

Hurdles to screen ‘James’ movie settled: Show will be in 275 theaters tomorrow
Bengaluru, March 24, 2022 (www.justkannada.in): Actor Shivarajkumar has pulled the curtains down over the controversy of filming Puneeth Rajkumar’s last movie ‘James’, making way for celebrated film director of the country Rajamouli’s RRR.
Actor Shivarajkumar met Chief Minister Basavaraj Bommai today to discuss the issue. Later he visited the film chamber and settled the matter after discussions. Accordingly, the movie ‘James,’ which was being screened in 386 cinema halls across the state, will continue in 275 cinema halls. However, the screening of ‘James’ in 111 theatres will end.
Addressing a press meet in Bengaluru, after discussing with the film chamber, actor Shivarajukumar said, “cinema hall problem is common. Sometimes the problem will be settled through dialogue and sometimes through agreement. I don’t know what discussion or agreement was there between the distributor and the exhibitors. But I stand by all. The Chief Minister has also spoken and responded regarding this. I thank him for it.”
“Appu’s movie release is a very emotional thing for all of us. The Hon’ble Chief Minister has responded regarding ‘James’. Let us not find fault in it now. All problems are solved. I won’t say the problem is solved under my leadership, it is a collective effort of all,” he added.
Keywords: James/ Puneeth Rajkumar/ Shivarajkumar/ film chamber

Key words: james-RRR-film-actor-Shivaraj kumar