370ನೇ ವಿಧಿಯಿಂದ  ಭಯೋತ್ಪಾದನೆ ಹೆಚ್ಚು: ಜಮ್ಮುಕಾಶ್ಮೀರ ಅಭಿವೃದ್ಧಿ ಕುಂಠಿತ-ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ…

ನವದೆಹಲಿ,ಆ,5,2019(www.justkannada.in): 370ನೇ ವಿಧಿಯಿಂದ ಭಯೋತ್ಪಾದನೆ ಹೆಚ್ಚಾಗಿತ್ತು. ಜಮ್ಮುಕಾಶ್ಮೀರ ಅಭಿವೃದ್ಧಿ ಕುಂಠಿತವಾಗಿ ಬಡತನ ತಲೆದೂರಿತ್ತು. ಹೀಗಾಗಿ 370ನೇ ವಿಧಿ ರದ್ದು ಮಾಡಿಯೇ ತೀರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮಂಡಿಸಿದ ವಿಧೇಯಕದ ಮೇಲೆ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಉತ್ತರಿಸಿದರು. ಈ ವೇಳೆ ಮಾತನಾಡಿದ ಅವರು,   ಜಮ್ಮು ಕಾಶ್ಮೀರ ವಿಚಾರವಾಗಿ ಮೊದಲ ಪ್ರಧಾನಿ ನಿರ್ಣಯ ಮಂಡಿಸಿದರು  ಅಂದಿನಿಂದ ಇಂದಿನವರೆಗೂ ಹಿಂಸಾಚಾರವಾಗಿದೆ. ಕಾಶ್ಮೀರದಲ್ಲಿ ಹಿಂಸಾಚಾರ. ರಕ್ತಪಾತ  ಯುಗಕ್ಕೆ ತೆರೆ ಎಳೆಯಬೇಕಿದೆ.  370ನೇ ವಿಧಿಯಿಂದ ಜಮ್ಮುಕಾಶ್ಮೀರ, ಲಡಾಖ್ ಗೆ ತೊಂದರೆಯಾಗಿದೆ. ಕಳೆದ ಹಲವು ವರ್ಷಗಳಿಂದ ಸಾವಿರಾರು ಜನ ಸಾವನ್ನಪ್ಪಿದ್ದಾರೆ.  ಅಮಾಯಕರ ಸಾವು ನೋವಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.

. 370ನೇ ವಿಧಿಯಿಂದ ಭಯೋತ್ಪಾದನೆ ಹೆಚ್ಚಾಗಿತ್ತು. ಪಂಚಾಯತ್ ನಿಂದ ಲೋಕಸಭೆ ವರೆಗೆ ಚುನಾವಣೆ ನಡೆಯುತ್ತಿರಲಿಲ್ಲ. 40 ವರ್ಷದಿಂದ ನಡೆದು ಬಂದಿದ್ದ ಪದ್ದತಿಗೆ ಹೊಣೆಯಾರು..? 370ನೇ ವಿಧಿಯಿಂದ ಜಮ್ಮುಕಾಶ್ಮೀರ ಅಭಿವೃದ್ಧಿ ಕುಂಠಿತವಾಗಿತ್ತು.  ಬಡತನ. ಸಣ್ಣ ಕೈಗಾರಿಕೆಯನ್ನೂ ಸ್ಥಾಪಿಸಲು ಆಗುತ್ತಿರಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಆಯುಷ್ಮಾನ ಇದ್ದರೂ ಸೌಲಭ್ಯ ಸಿಗುತ್ತಿರಲಿಲ್ಲ. ಕಡ್ಡಾಯಶಿಕ್ಷಣ ಕಾಯ್ದೆ ಜಾರಿಯಲ್ಲಿದ್ದರೂ ಅದರ ಉಪಯೋಗವಾಗುತ್ತಿರಲಿಲ್ಲ. ನಾಳೆ ಲೋಕಸಭೆಯಲ್ಲಿ ಮಸೂದೆ ಅಂಗೀಕಾರವಾದರೇ ನಾಳೆ  ರಾತ್ರಿಯಿಂದಲೇ ಕಡ್ಡಾಯ ಶಿಕ್ಷಣ ಜಾರಿ ಮಾಡುತ್ತೇವೆ. ಜಮ್ಮು ಕಾಶ್ಮೀರದಲ್ಲಿ ಪ್ರತಿ ಮಗುವಿಗೂ ಶಿಕ್ಷಣ ನೀಡುತ್ತೇವೆ ಎಂದರು.

Key words: Terrorism -Article 370-Jammu & Kashmir -Union Home Minister- Amit Shah – Rajya Sabha