ಬೆಂಗಳೂರು, ಮಾರ್ಚ್ 26, 2022 (www.justkannada.in): ಬೇಸಿಗೆಯಲ್ಲಿ ರಾಜ್ಯದ ಜನತೆಗೆ ಪವರ್ ಕಟ್ ಶಾಕ್ ತಟ್ಟೋದು ಖಚಿತ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಬೇಸಿಗೆಯಲ್ಲಿ ಯಾವುದೇ ವಿದ್ಯುತ್ ಕೊರತೆಯಾಗಲ್ಲ. ಲೋಡ್ ಶೆಡ್ಡಿಂಗ್ ಕೂಡ ಇಲ್ಲ ಎಂದು ಹೇಳಿದ್ದರು. ಆದರೀಗ ರಾಯಚೂರು ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಕಲ್ಲಿದ್ದಲು ಕೊರತೆಯಿಂದಾಗಿ, 8 ಘಟಕಗಳಲ್ಲಿ 3 ಘಟಕಗಳು ಸ್ಥಗಿತಗೊಂಡಿವೆ. ಹೀಗಾಗಿ ಪವರ್ ಕಟ್ ಖಚಿತ ಎನ್ನಲಾಗುತ್ತಿದೆ.
ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ಪೂರೈಕೆ ಮಾಡುವಂತ ರಾಯಚೂರಿನ ಆರ್ ಟಿ ಪಿಎಸ್ ಹಾಗೂ ವೈಟಿಪಿಎಸ್ ಕೇಂದ್ರಗಳಲ್ಲಿ ಈಗ ಕಲ್ಲಿದ್ದಲು ಕೊರತೆ ಎದುರಾಗಿದೆ ಎನ್ನಲಾಗಿದೆ.
ಆರ್ ಟಿ ಪಿಎಸ್ ನ 8 ಘಟಕದಲ್ಲಿ 5 ಮಾತ್ರ ವಿದ್ಯುತ್ ಉತ್ಪಾದನೆ ಮಾಡುತ್ತಿವೆಯಂತೆ. ಮಿಕ್ಕುಳಿದಂತ 3 ಘಟಕಗಳು ಕಲ್ಲಿದ್ದಲು ಕೊರತೆಯಿಂದಾಗಿ ಸ್ಥಗಿತಗೊಂಡಿವೆ ಎನ್ನಲಾಗಿದೆ.